Saturday, 14th December 2024

2025ರಲ್ಲಿ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ

ನವದೆಹಲಿ: ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ಭಾರತದ ಆರ್ಥಿಕತೆ ಪ್ರಸಕ್ತ ವರ್ಷ 6ನೇ ಸ್ಥಾನಕ್ಕೆ ಇಳಿಕೆಯಾಗಿದೆ. 2025ರಲ್ಲಿ ಇಂಗ್ಲೆಂಡ್ ನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಲಿದ್ದು, 2030ಕ್ಕೆ ಮೂರನೇ ಸ್ಥಾನಕ್ಕೆ ಸ್ಪರ್ಧಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಲಾಕ್ ಡೌನ್ ಕಾರಣದಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ಆದರೆ ಈ ವರ್ಷ ಇಂಗ್ಲೆಂಡ್ ಭಾರತವನ್ನು ಹಿಂದಿಕ್ಕಿದೆ. ಅದು 2024ರವರೆಗೆ ಮುಂದುವರಿಯಲಿದೆ ಎಂದು ಎಕನಾಮಿಕ್ಸ್ ಅಂಡ್ ಬ್ಯುಸ್ ನೆಸ್ ರಿಸರ್ಚ್ ಸೆಂಟರ್ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಭಾರತದ ಆರ್ಥಿಕತೆ ಮುಂದಿನ ವರ್ಷ ಶೇ.9, 2022ರ ಹೊತ್ತಿಗೆ ಶೇಕಡಾ 7 ರಷ್ಟಾಗಲಿದೆ.

ಭಾರತದ ವಾರ್ಷಿಕ ಜಿಡಿಪಿ ಬೆಳವಣಿಗೆ 2035ರ ಹೊತ್ತಿಗೆ ಶೇಕಡಾ 5.8ಕ್ಕೆ ಕುಸಿಯಲಿದೆ. 2030ರ ಹೊತ್ತಿಗೆ ಭಾರತ ವಿಶ್ವದಲ್ಲಿ 3ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಬೆಳವಣಿಗೆಯಾಗಲಿದೆ.