Sunday, 15th December 2024

ಭಾರತದಲ್ಲಿ 45 ಸಾವಿರ ಟ್ವಿಟರ್ ಖಾತೆಗಳ ನಿಷೇಧ

ನವದೆಹಲಿ: ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿ ಸಿದ ಹಿನ್ನೆಲೆ ಟ್ವಿಟರ್ ಅಕ್ಟೋಬರ್ 26 ಮತ್ತು ನವೆಂಬರ್ 25 ರ ನಡುವೆ ಭಾರತದಲ್ಲಿ 45,589 ಖಾತೆಗಳನ್ನು ನಿಷೇಧಿಸಿದೆ.

ಅದೇ ಸಮಯದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ 3,035 ಖಾತೆಗಳನ್ನು ತೆಗೆದುಹಾಕಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು48,624 ಖಾತೆಗಳನ್ನು ಟ್ವಿಟರ್ ನಿಷೇ ಧಿಸಿದೆ ಎಂದು ವರದಿ ಮಾಡಿದೆ.

ಟ್ವಿಟರ್ ತನ್ನ ಮಾಸಿಕ ವರದಿಯಲ್ಲಿ ತನ್ನ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಮೂಲಕ ಭಾರತದಲ್ಲಿನ ಬಳಕೆದಾರ ರಿಂದ 755 ದೂರುಗಳನ್ನು ಸ್ವೀಕರಿಸಿತ್ತು. ಅದರಲ್ಲಿ 121 ದೂರುಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಹೇಳಿದೆ.

ನಿಂದನೆ/ಕಿರುಕುಳ (681), ನಂತರ IP-ಸಂಬಂಧಿತ ಉಲ್ಲಂಘನೆ (35), ದ್ವೇಷಪೂರಿತ ನಡವಳಿಕೆ (20), ಮತ್ತು ಗೌಪ್ಯತೆ ಉಲ್ಲಂಘನೆ (15) ಈ ಕುರಿತಂತೆ ಭಾರತದಿಂದ ಹೆಚ್ಚಿನ ದೂರುಗಳು ಬಂದಿವೆ ಎಂದು ತಿಳಿಸಿದೆ.

ಹೊಸ ಐಟಿ ನಿಯಮಗಳು 2021 ರ ಅಡಿಯಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕು.

Read E-Paper click here