Thursday, 28th November 2024

Indian Railways: ಹಬ್ಬದ ಋತುವಿನಲ್ಲಿ ಭಾರತೀಯ ರೈಲ್ವೆಗೆ ಹರಿದುಬಂತು ಬರೋಬ್ಬರಿ 12,159 ಕೋಟಿ ರೂ. ಆದಾಯ

Indian Railways

ಹೊಸದಿಲ್ಲಿ: ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ (Festive Season) ಭಾರತೀಯ ರೈಲ್ವೆ (Indian Railways) 12,159 ಕೋಟಿ ರೂ. ಆದಾಯ ಗಳಿಸಿದೆ (Indian Railways income) ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Railways Minister Ashwini Vaishnaw) ಅವರು ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಹಬ್ಬದ ರಜಾದಿನಗಳಲ್ಲಿ ಕೋಟ್ಯಾಂತರ ಮಂದಿ ರೈಲಿನಲ್ಲಿ ಪ್ರಯಾಣಿಸಿದ್ದರು. ಇದರಿಂದಾಗಿ ಹಬ್ಬದ ಅವಧಿಯಲ್ಲಿ ಭಾರತೀಯ ರೈಲ್ವೆಯು ಆದಾಯದಲ್ಲಿ ದಾಖಲೆ ಬರೆದಿದೆ ಎಂದು ಅವರು ಹೇಳಿದ್ದಾರೆ.

ಬುಧವಾರ ಸಂಸತ್ತಿನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 2024ರ ಸೆಪ್ಟೆಂಬರ್ 1ರಿಂದ ಅಕ್ಟೋಬರ್ 31 ರವರೆಗಿನ ಹಬ್ಬದ ಅವಧಿಯಲ್ಲಿ ಭಾರತೀಯ ರೈಲ್ವೆಯು ಟಿಕೆಟ್ ಮಾರಾಟದಿಂದ 12,159.35 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಎರಡು ತಿಂಗಳ ಅವಧಿಯು ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳನ್ನು ದೇಶಾದ್ಯಂತ ಆಚರಿಸಲಾಗಿತ್ತು. ಇದು ರೈಲ್ವೆ ಪ್ರಯಾಣಿಕರ ಉತ್ತೇಜನಕ್ಕೆ ಸಿಕ್ಕ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.

ರೈಲ್ವೆ ಟಿಕೆಟ್ ಮಾರಾಟದ ಆದಾಯದ ಅಂಕಿ ಅಂಶವನ್ನು ಹಂಚಿಕೊಂಡಿರುವ ಅವರ ಬಳಿ ಟಿಕೆಟ್ ರದ್ದತಿಯಿಂದ ರೈಲ್ವೆ ಇಲಾಖೆ ಗಳಿಸಿದ ಮೊತ್ತದ ಬಗ್ಗೆಯೂ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಯಾಣಿಕರು ಟಿಕೆಟ್ ರದ್ದುಪಡಿಸಿದ ಖಾತೆಯಲ್ಲಿ ಜಮೆಯಾದ ಮೊತ್ತವನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಅಶ್ವಿನ್ ವೈಷ್ಣವ್ ಅವರು ನೀಡಿರುವ ಸೆ. 1ರಿಂದ ನ. 10 ನಡುವಿನ ಅವಧಿಯ ವಲಯವಾರು ಪ್ರಯಾಣಿಕರ ಅಂಕಿ ಅಂಶಗಳ ವಿವರ ಇಂತಿದೆ.

ಕೇಂದ್ರ ವಲಯ 31.63 ಕೋಟಿ, ಪೂರ್ವ ವಲಯ 24.67 ಕೋಟಿ, ಪೂರ್ವ ಮಧ್ಯ ವಲಯ 4.41 ಕೋಟಿ, ಪೂರ್ವ ಕರಾವಳಿ ವಲಯ 1.77 ಕೋಟಿ, ಉತ್ತರ ವಲಯ 8.61 ಕೋಟಿ, ಉತ್ತರ ಮಧ್ಯ ವಲಯ 2.72 ಕೋಟಿ, ಈಶಾನ್ಯ ವಲಯ 3.17 ಕೋಟಿ, ಈಶಾನ್ಯ ಗಡಿಭಾಗ ವಲಯ 1.81 ಕೋಟಿ, ವಾಯುವ್ಯ ವಲಯ 3.6 ಕೋಟಿ, ದಕ್ಷಿಣ ವಲಯ 14.55 ಕೋಟಿ, ದಕ್ಷಿಣ ಮಧ್ಯ ವಲಯ 5 ಕೋಟಿ, ಆಗ್ನೇಯ ವಲಯ 4.42 ಕೋಟಿ, ಆಗ್ನೇಯ ಮಧ್ಯ ವಲಯ 1.48 ಕೋಟಿ, ನೈಋತ್ಯ ವಲಯ 3.27 ಕೋಟಿ, ಪಶ್ಚಿಮ ವಲಯ 26.13 ಕೋಟಿ, ಪಶ್ಚಿಮ ಮಧ್ಯ ವಲಯ 2.03 ಕೋಟಿ, ಮೆಟ್ರೋ ವಲಯ 4.44 ಕೋಟಿ, ಒಟ್ಟು 143.71 ಕೋಟಿ ಮಂದಿ ಪ್ರಯಾಣಿಸಿದ್ದಾರೆ.

ಸೆ. 1 ಮತ್ತು ನ. 10ರ ನಡುವೆ ಒಟ್ಟು 143.71 ಕೋಟಿ ಪ್ರಯಾಣಿಕರು ರೈಲ್ವೆಯನ್ನು ಬಳಸಿದ್ದಾರೆ. ಕೇಂದ್ರ ವಲಯದಲ್ಲಿ ಗರಿಷ್ಠ 31.63 ಕೋಟಿ ದಾಖಲಾಗಿದೆ. ಆಗ್ನೇಯ ಕೇಂದ್ರ ವಲಯವು ಕಡಿಮೆ ಪ್ರಯಾಣಿಕರ ಸಂಖ್ಯೆ 1.48 ಕೋಟಿ ದಾಖಲಿಸಿದೆ.

ಪಶ್ಚಿಮ ವಲಯ 26.13 ಕೋಟಿ ಪ್ರಯಾಣಿಕರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 24.67 ಕೋಟಿ ಪ್ರಯಾಣಿಕರೊಂದಿಗೆ ಪೂರ್ವ ವಲಯ ಎರಡನೇ ಸ್ಥಾನದಲ್ಲಿದೆ.

PAN 2.0: ನಿಮ್ಮ ಇ- ಮೇಲ್‌ಗೇ ಬರಲಿದೆ ಹೊಸ ಇ- ಪ್ಯಾನ್!

ಹಬ್ಬದ ವೇಳೆ ಜನದಟ್ಟಣೆಯನ್ನು ನಿಭಾಯಿಸಲು ಅ. 1 ಮತ್ತು ನ. 11ರ ನಡುವೆ 7,983 ಹೆಚ್ಚುವರಿ ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ಘೋಷಿಸಿತ್ತು. ಹೊಸ ರೈಲುಗಳು ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ. ಕಳೆದ ವರ್ಷ ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚಳವನ್ನು ಪೂರೈಸಲು ದೀಪಾವಳಿ ಮತ್ತು ಛತ್ ಪೂಜೆಯ ಸಮಯದಲ್ಲಿ 4,500 ವಿಶೇಷ ರೈಲುಗಳನ್ನು ಓಡಿಸಲಾಗಿತ್ತು.