ಮುಂಬೈ : ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ಮುಂಬೈ (Mumbai’s Chhatrapati Shivaji Maharaj International Airport) ವಿಮಾನ ನಿಲ್ದಾಣದಲ್ಲಿ ಶನಿವಾರ ಇಸ್ತಾಂಬುಲ್‌ಗೆ ಹೊರಡಬೇಕಿದ್ದ ಇಂಡಿಗೋ ವಿಮಾನವು ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದೆ. ಸುಮಾರು 100ಕ್ಕೂ ಅಧಿಕ ಪ್ರಯಾಣಿಕರು 16 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಸಿಲುಕೊಕೊಂಡು ಪರದಾಡಿದ್ದಾರೆ. ವಿಳಂಬವಾದ(Indigo Flight Delay) ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆ ಪ್ರಯಾಣಿಕರ ಕ್ಷಮೆ ಕೋರಿದೆ. ಹಲವಾರು ಪ್ರಯಾಣಿಕರು ವಿಮಾನ ವಿಳಂಬದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
This is just unacceptable #Indigo 😔Protests because the 5.40 am flight to Mumbai is delayed to 11.30am but the indigo 9.30am is leaving on time. pic.twitter.com/pnxb4IqKt4
— gyani baba (@gyanibaba_000) January 14, 2024
ನಮ್ಮ ಫ್ಲೈಟ್ 6E17, ಮೂಲತಃ ಮುಂಬೈನಿಂದ ಇಸ್ತಾನ್‌ಬುಲ್‌ಗೆ ಪ್ರಯಾಣಿಸಬೇಕಿತ್ತು. ತಾಂತ್ರಿಕ ಸಮಸ್ಯೆಗಳಿಂದಾಗಿ ವಿಳಂಬ ಆಗುತ್ತಿದೆ ಎಂದು ಹೇಳಲು ನಾವು ವಿಷಾದಿಸುತ್ತೇವೆ. ದುರದೃಷ್ಟವಶಾತ್, ಸಮಸ್ಯೆಯನ್ನು ಸರಿಪಡಿಸಲು ಮತ್ತು ಅದನ್ನು ಗಮ್ಯಸ್ಥಾನಕ್ಕೆ ರವಾನಿಸಲು ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ನಾವು ಅಂತಿಮವಾಗಿ ವಿಮಾನವನ್ನು ರದ್ದುಗೊಳಿಸಬೇಕಾಯಿತು. ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕರ ಆಕ್ರೋಶ
ವಿಮಾನ ವಿಳಂಬವಾಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವಿಮಾನ ಸಂಸ್ಥೆ ಯಾವುದೇ ಆಹಾರ ಅಥವಾ ನೀರನ್ನು ಸಹ ನೀಡಲಾಗಿಲ್ಲ ಎಂದು ಹೇಳಿದ್ದಾರೆ. “ಪ್ರಯಾಣಿಕರು 10 ಗಂಟೆಗಳ ಕಾಯುವಿಕೆಯ ನಂತರ ಮುಂಬೈನಿಂದ ಇಸ್ತಾಂಬುಲ್ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಸುಮಾರು 100 ಪ್ರಯಾಣಿಕರಲ್ಲಿ ವಿದ್ಯಾರ್ಥಿಗಳು ಹೆಚ್ಚಿದ್ದರು. ಯಾವೊಬ್ಬ ಅಧಿಕಾರಿಗಳೂ ನಮ್ಮ ಬಳಿ ಬಂದು ಕುಂದು ಕೊರತೆಗಳ ಬಗ್ಗೆ ವಿಚಾರಿಸಲಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಬಹುತೇಕ ವಿದ್ಯಾರ್ಥಿಗಳನ್ನು ಒಳಗೊಂಡ ಹಲವಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ವಿಮಾನಯಾನ ಸಂಸ್ಥೆಯು ಮರುಪಾವತಿಯನ್ನು ನೀಡಬೇಕು ಅಥವಾ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. 10 ಗಂಟೆಗಳ ವಿಳಂಬದ ನಂತರ 11 ಗಂಟೆಗೆ ಇಸ್ತಾಂಬುಲ್‌ಗೆ ಪರ್ಯಾಯ ವಿಮಾನವನ್ನು ಕಲ್ಪಿಸಲಾಗಿದ್ದು, ವಿಳಂಬಕ್ಕಾಗಿ ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆ ಕೋರಿದೆ.
ಈ ಸುದ್ದಿಯನ್ನೂ ಓದಿ : Kazakhstan plane crash: ಕಜಕಿಸ್ತಾನದ ವಿಮಾನ ಪತನಕ್ಕೂ ಮುನ್ನ ಏನಾಗಿತ್ತು? ವಿಡಿಯೋ ವೈರಲ್