Thursday, 2nd January 2025

IPPB Recruitment 2025: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು: ಕೇಂದ್ರ ಸರ್ಕಾರದ ಭಾರತೀಯ ಅಂಚೆ ಇಲಾಖೆ (Department of Post)ಯ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಲಿಮಿಟೆಡ್‌ (India Post Payments Bank)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ (IPPB Recruitment 2025). ಮ್ಯಾನೇಜರ್‌, ಅಸಿಸ್ಟಂಟ್‌ ಮ್ಯಾನೇಜರ್‌- ಐಟಿ ಸೇರಿ ಸುಮಾರು 68 ಹುದ್ದೆಗಳಿವೆ. ಎಂಜಿನಿಯರಿಂಗ್‌ ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅಪ್ಲೈ ಮಾಡಲು ಕೊನೆಯ ದಿನ 2025ರ ಜ. 10 (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಅಸಿಸ್ಟೆಂಟ್ ಮ್ಯಾನೇಜರ್ ಐಟಿ – 54 ಹುದ್ದೆ
ಮ್ಯಾನೇಜರ್ ಐಟಿ-(ಪೇಮೆಂಟ್ ಸಿಸ್ಟಮ್ಸ್) – 1 ಹುದ್ದೆ
ಮ್ಯಾನೇಜರ್ ಐಟಿ-(ಇನ್ಫ್ರಾಸ್ಟ್ರಕ್ಚರ್, ನೆಟ್‌ವರ್ಕ್‌ & ಕ್ಲೌಡ್) – 2 ಹುದ್ದೆ
ಮ್ಯಾನೇಜರ್ ಐಟಿ-(ಎಂಟರ್ಪ್ರೈಸ್ ಡೇಟಾ ವೇರ್‌ಹೌಸ್‌) – 1 ಹುದ್ದೆ
ಸೀನಿಯರ್ ಮ್ಯಾನೇಜರ್-ಐಟಿ (ಪೇಮೆಂಟ್ಸ್ ಸಿಸ್ಟಮ್) – 1 ಹುದ್ದೆ
ಸೀನಿಯರ್ ಮ್ಯಾನೇಜರ್-ಐಟಿ (ಇನ್ಫ್ರಾಸ್ಟ್ರಕ್ಚರ್, ನೆಟ್‌ವರ್ಕ್‌ & ಕ್ಲೌಡ್) – 1 ಹುದ್ದೆ
ಸೀನಿಯರ್ ಮ್ಯಾನೇಜರ್-ಐಟಿ (ಮಾರಾಟಗಾರ, ಹೊರಗುತ್ತಿಗೆ, ಗುತ್ತಿಗೆ ನಿರ್ವಹಣೆ, ಸಂಗ್ರಹಣೆ, ಎಸ್ಎಲ್ಎ, ಪಾವತಿಗಳು) – 1 ಹುದ್ದೆ
ಸೈಬರ್ ಸೆಕ್ಯುರಿಟಿ ಎಕ್ಸ್‌ಪರ್ಟ್‌ 7 ಹುದ್ದೆ
ವಿವಿಧ ಹುದ್ದೆಗೆ ಅನುಗುಣವಾಗಿ ಬಿಇ ಅಥವಾ ಬಿ.ಟೆಕ್‌, ಬಿ.ಎಸ್‌ಸಿ, ಕಂಪ್ಯೂಟರ್ ಸೈನ್ಸ್/ ಐಟಿ/ ಕಂಪ್ಯೂಟರ್ ಅಪ್ಲಿಕೇಶನ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು, ಕಾರ್ಯಾನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 20-50 ವರ್ಷದವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಯ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಶುಲ್ಕವಾಗಿ ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳು 150 ರೂ. ಪಾವತಿಸಬೇಕು. ಇತರ ಎಲ್ಲ ಅಭ್ಯರ್ಥಿಗಳು 750 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್‌. ಆನ್‌ಲೈನ್‌ ಟೆಸ್ಟ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

IPPB Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸುವ ವಿಧಾನ
    (https://ibpsonline.ibps.in/ippbldec24/)
  • ಹೆಸರು ನೋಂದಾಯಿಸಿ.
  • ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: ippbonline.comಗೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ: BOB Recruitment 2025: ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 1,267 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದ್ದರೆ ಈಗಲೇ ಅಪ್ಲೈ ಮಾಡಿ