Thursday, 21st November 2024

Isha Koppikar: ಆತ ಬೇಜವಾಬ್ದಾರಿ ಮನುಷ್ಯ… ವಿಚ್ಛೇದನ ಕಾರಣ ಬಿಚ್ಚಿಟ್ಟ ʻಸೂರ್ಯವಂಶʼ ನಾಯಕಿ

ಮುಂಬೈ: ಕನ್ನಡದ ಸೂರ್ಯವಂಶ, ಓ ನನ್ನ ನಲ್ಲೆ ಚಿತ್ರದಲ್ಲಿ ನಟಿಸಿದ್ದ ನಟಿ(actress) ಇಶಾ ಕೊಪ್ಪಿಕರ್‌(Isha Koppikar) ಹಲವರಿಗೆ ನೆನಪಿರಬೇಕಲ್ಲ? ಹೌದು ಕನ್ನಡದಲ್ಲಿ ನಟರಾದ ಡಾ ವಿಷ್ಣುವರ್ಧನ್(Vishnuvardhan) ಹಾಗೂ ರವಿಚಂದ್ರನ್(Ravichandran) ಅವರೊಂದಿಗೆ ಕ್ರಮವಾಗಿ ಸೂರ್ಯವಂಶ ಹಾಗು ಓ ನನ್ನ ನಲ್ಲೆ ಚಿತ್ರಗಳಲ್ಲಿ ನಟಿಸಿದ್ದ ನಟಿ ಇಶಾ ಕೊಪ್ಪಿಕರ್‌ ಬಹುಭಾಷಾ ನಟಿ. ಬಾಲಿವುಡ್‌(Bollywood)ನಲ್ಲೂ ನಟಿಸಿರುವ ಈಕೆ ತಮಿಳು ಹಾಗೂ ತೆಲುಗಿನ ಕೆಲವು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಆದ್ರೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ಇಶಾ ಕೊಪ್ಪಿಕರ್​ ಅವರ ಖಾಸಗಿ ಬದುಕಿನ(private life) ಬಗ್ಗೆ ಕಳೆದ ನವೆಂಬರ್ ನಲ್ಲಿ ಒಂದು ಕಹಿ ಸುದ್ದಿ ಕೇಳಿಬಂದಿತ್ತು. ಹೌದು ಪತಿ ಟಿಮ್ಮಿ ನಾರಂಗ್(Timmy Narang)​ ಜೊತೆಗಿನ 14 ವರ್ಷಗಳ ದಾಂಪತ್ಯವನ್ನು ಅವರು ಅಂತ್ಯಗೊಳಿಸಿ ಇಶಾ ಕೊಪ್ಪಿಕರ್​ ವಿಚ್ಛೇದನ(divorce) ಪಡೆದಿದ್ದು, ಗಂಡನ ಮನೆಯಿಂದ ಹೊರಗೆ ಬಂದಿರುವುದು ಕಳೆದ ನವೆಂಬರ್ ನಲ್ಲಿ ಜಗಜಾಹೀರಾಗಿತ್ತು. 2009ರಲ್ಲಿ ಉದ್ಯಮಿ ಟಿಮ್ಮಿ ನಾರಂಗ್​ ಜೊತೆ ಇಶಾ ಕೊಪ್ಪಿಕರ್​ ಅವರ ವಿವಾಹ ನೆರವೇರಿತ್ತು. ಪರಸ್ಪರ ಪ್ರೀತಿಸಿ ಅವರು ಮದುವೆ ಆಗಿದ್ದರು. ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. 14 ವರ್ಷಗಳ ಕಾಲ ಒಟ್ಟಾಗಿ ಸಂಸಾರ ಮಾಡಿದ ಈ ಜೋಡಿಯ ಬದುಕಿನಲ್ಲಿ ಬಿರುಕು ಉಂಟಾಗಿ ಇಬ್ಬರೂ ವಿಚ್ಛೇದನ ಪಡೆದು ದೂರ ಆಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿತ್ತು.

ಆದರೆ ಇಲ್ಲಿಯವರೆಗೆ ವಿಚ್ಛೇದನದ ಸುದ್ದಿ ಬಗ್ಗೆ ಮೌನ ವಹಿಸಿದ್ದ ಇಶಾ ಕೊಪ್ಪಿಕರ್​ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದು, ಡಿವೋರ್ಸ್ ಪಡೆಯಲು ಹಿಂದಿರುವ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವ ಇಶಾ ಕೊಪ್ಪಿಕರ್, ಟಿಮ್ಮಿ ನಾರಂಗ್ ​ಅವರೇ ಮೊದಲು ಬೇರೆಯಾಗಲು ತೀರ್ಮಾನಿಸಿದ್ದು, ನಮ್ಮ ನಡುವೆ ಏನು ಸಮಸ್ಯೆ ಆಯಿತೆಂದು ಹೇಳುವುದಕ್ಕೆ ಕಷ್ಟ ಎಂದು ಹೇಳಿದ್ದಾರೆ. ಅಲ್ಲದೇ ಏಕಾಏಕಿ ಒಂದು ದಿನ ನನ್ನ ಬಳಿ ಬಂದ ಟಿಮ್ಮಿ ನಮ್ಮ ನಡುವೆ ಏನೂ ಸರಿ ಹೋಗುತ್ತಿಲ್ಲ, ಆಗಾಗ ಜಗಳ-ಮನಸ್ತಾಪಗಳು ನಡೆಯುತ್ತಿರುವುದರಿಂದ ಮನಸ್ಸಿನ ನೆಮ್ಮದಿ ಹಾಳಾಗುತ್ತಿದೆ. ಇದಕ್ಕೆ ಡಿವೋರ್ಸ್ ಪಡೆಯುವುದೇ ಸರಿ ಎಂದು ತಿಳಿಸಿದರು. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ನಾನು ಒಪ್ಪಿಗೆ ನೀಡಿದೆ ಎಂದಿದ್ದಾರೆ.

ಆದರೆ ಇದೇ ವೇಳೆ ಈ ನಿರ್ಧಾರ ತೆಗೆದುಕೊಳ್ಳುವುದು ನನಗೆ ಸುಲಭವಾಗಿರಲಿಲ್ಲ ಎಂಬುದನ್ನು ತಿಳಿಸಿರುವ ಇಶಾ ಕೊಪ್ಪಿಕರ್ , ಈ ತೀರ್ಮಾನ ನನ್ನ ಮೌಲ್ಯ ಹಾಗೂ ಆದರ್ಶಕ್ಕೆ ವಿರುದ್ಧವಾಗಿತ್ತು. ಆದರೂ ಬೇರೆಯಾಗಬೇಕಾಯ್ತು. ಯಾಕೆಂದರೆ ನನಗೆ ಆಧ್ಯಾತ್ಮದತ್ತ ಒಲವು ಜಾಸ್ತಿ. ನಿತ್ಯ ಜಗಳವಾಡುವುದರಲ್ಲಿ ಅರ್ಥ ಇಲ್ಲ ಎಂದು ನನಗೆ ಅನ್ಸಿತ್ತು. ಹೀಗಾಗಿ ಆ ಸಂಬಂಧದಿಂದ ಹೊರ ಬಂದೆ ಎಂದು ಹೇಳಿದ್ದಾರೆ.


ಇನ್ನು ಇದೇ ವೇಳೆ ತಮ್ಮ ಮಗಳು ರಿಯಾ ಬಗ್ಗೆಯೂ ಮಾತಾನಾಡಿದ್ದು, ನಮ್ಮಿಬ್ಬರ ಈ ನಿರ್ಣಯದಿಂದ ರಿಯಾ ಮೇಲೆ ಪರಿಣಾಮ ಬೀರಬಹುದು ಎಂದು ನನಗೆ ಮೊದಲೇ ತಿಳಿದಿತ್ತು. ಹಾಗಾಗಿ ನಾವಿಬ್ಬರು ವಿಚ್ಚೇದನ ಪಡೆಯುತ್ತಿರುವ ವಿಷಯವನ್ನು ನಾನು ನನ್ನ ಮಗಳು ರಿಯಾನಗೆ ಸೂಕ್ಷ್ಮವಾಗಿ ಹೇಳಿ ಅರ್ಥ ಮಾಡಿಸಬೇಕೆಂದು ಅಂದುಕೊಂಡಿದ್ದೆ. ಆದರೆ ಇಲ್ಲಿಯೂ ಬೇಜವಾಬ್ಧಾರಿಯನ್ನು ತೋರಿದ ಟಿಮ್ಮಿ ನಾರಂಗ್, ಮಗಳ ಮುಂದೆ ಏಕಾಏಕಿ ನಾವು ದೂರವಾಗುತ್ತಿರುವ ವಿಚಾರವನ್ನು ಹೇಳಿದ. ಇದರಿಂದ ಆಕೆ ಆಘಾತಕ್ಕೊಳಗಾದಳು, ಆದರೆ ಕೆಲ ದಿನಗಳ ನಂತರ ತನ್ನ ತಪ್ಪಿನ ಅರಿವಾಗಿ ನನ್ನ ಮಾಜಿ ಗಂಡ ನನ್ನ ಬಳಿ ಬಂದು ಕ್ಷಮೆಯನ್ನು ಹೇಳಿದ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ.

ಇಶಾ ಕೊಪ್ಪಿಕರ್​ ಅವರು 1997ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮರಾಠಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲೊಂದು ಇಲ್ಲೊಂದು ಪ್ರಾಜೆಕ್ಟ್​ ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ರಾಜಕೀಯದಲ್ಲಿ ಅವರಿಗೆ ಆಸಕ್ತಿ ಮೂಡಿದೆ. 2019ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

Salman Khan : ಸಲ್ಮಾನ್‌ ಖಾನ್‌ ಜೊತೆ ಸಿಕಂದರ್‌ ಸಿನಿಮಾ ಲಿರಿಸಿಸ್ಟ್‌ಗೂ ಜೀವ ಬೆದರಿಕೆ; ಕರ್ನಾಟಕ ಮೂಲದ ಕಿಡಿಗೇಡಿ ಅರೆಸ್ಟ್‌