ನವದೆಹಲಿ: ರಾಜ್ಯಸಭೆ(Rajya Sabha) ಸ್ಪೀಕರ್ ಜಗದೀಪ್ ಧನ್‌ಕರ್(Jagdeep Dhankhar) ವಿರುದ್ಧ ಪ್ರತಿಪಕ್ಷಗಳ INDIA ಮೈತ್ರಿಕೂಟದ ಸಂಸದರು ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು(No-Confidence Motion) ಮಂಡಿಸಿದ್ದಾರೆ. INDIA ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ತೃಣಮೂಲ, ಎಎಪಿ, ಎಸ್ಪಿ, ಡಿಎಂಕೆ ರಾಷ್ಟ್ರೀಯ ಜನತಾ ದಳದ 50ಕ್ಕೂ ಅಧಿಕ ಸಂಸದರು ಸಹಿ ಹಾಕಿರುವ ಅವಿಶ್ವಾಸ ನಿರ್ಣಯ ಪತ್ರವನ್ನು ರಾಜ್ಯಸಭೆಯ ಕಾರ್ಯದರ್ಶಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
#WATCH | On Opposition's no-confidence motion against Rajya Sabha Chairman Jagdeep Dhankhar, Congress MP Jairam Ramesh says, " In the last 72 years, it is the first time that Opposition parties have submitted a motion over Rajya Sabha Chairman. This shows how the situation has… pic.twitter.com/ySiO4r8D7u
— ANI (@ANI) December 10, 2024
ಸದನದ ಕಲಾಪದ ವೇಳೆ ರಾಜ್ಯಸಭಾ ಸ್ಪೀಕರ್ ಪಕ್ಷಪಾತ ಮಾಡುತ್ತಿದ್ದು, ಭಾಷಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಪ್ರಮುಖ ವಿಚಾರಗಳ ಬಗ್ಗೆ ಚರ್ಚೆನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್(Jairam Ramesh), “ಇಂಡಿಯಾ ಒಕ್ಕೂಟಕ್ಕೆ ಸೇರಿದ ಎಲ್ಲಾ ಪಕ್ಷಗಳಿಗೆ ರಾಜ್ಯಸಭೆಯ ಗೌರವಾನ್ವಿತ ಸ್ಪೀಕರ್ ವಿರುದ್ಧ ಔಪಚಾರಿಕವಾಗಿ ಅವಿಶ್ವಾಸ ನಿರ್ಣಯವನ್ನು ಸಲ್ಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಹೇಳಿದ್ದಾರೆ. ಅವರು ಸದನದ ಕಲಾಪವನ್ನು ಪಕ್ಷಪಾತದಿಂದ ನಡೆಸುತ್ತಾರೆ. ಅವಿಶ್ವಾಸ ನಿರ್ಣಯವು ಇಂಡಿಯಾ ಒಕ್ಕೂಟಕ್ಕೆ ಅತ್ಯಂತ ನೋವಿನ ನಿರ್ಧಾರವಾಗಿದೆ. ಆದರೆ ಸಂಸದೀಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನಾವು ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ” ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ
ಕಾಂಗ್ರೆಸ್‌ನ ನಾಯಕರು ಅಮೆರಿಕದ ಬಿಲಿಯನೇರ್ ಜಾರ್ಜ್ ಸೊರೊರ್ಸ್ ನಡುವಿನ ಸಂಬಂಧದ ಬಗ್ಗೆ ಪ್ರತಿಪಕ್ಷಗಳ ನಡುವಿನ ಚರ್ಚೆ ತಾರಕಕ್ಕೇರಿದ ಪರಿಣಾಮ ರಾಜ್ಯಸಭೆಯ ಕಲಾಪವನ್ನು ಮಂಗಳವಾರ( ಡಿ.10) ಮತ್ತೆ ಮುಂದೂಡಲಾಯಿತು. ಎನ್‌ಡಿಎ ಬಣವು INDIA ಮೈತ್ರಿಕೂಟವು ಸದನದ ಕಾರ್ಯನಿರ್ವಹಣೆಗೆ ಅವಕಾಶ ನೀಡಲಿಲ್ಲ ಎಂದು ಆರೋಪ ಮಾಡಿದೆ.
ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ವಿರುದ್ಧದ ಆರೋಪಗಳ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ಅವರ ವ್ಯಂಗ್ಯಚಿತ್ರಗಳ ಪೋಸ್ಟರ್ ಅನ್ನು ಕೈಯಲ್ಲಿ ಹಿಡಿದಿದ್ದರು. “ಮೋದಿ ಅದಾನಿ ಭಾಯಿ ಭಾಯಿ” ಎಂಬ ಘೋಷಣೆಯನ್ನು ಪೋಸ್ಟರ್ ನಲ್ಲಿ ಮುದ್ರಿಸಲಾಗಿತ್ತು.
“ಆಡಳಿತ ಪಕ್ಷವು ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡದಿರುವುದು ದೇಶದ ದೌರ್ಭಾಗ್ಯ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಸಮಸ್ಯೆಗಳನ್ನು ಚರ್ಚಿಸಲು ಸಭೆ ಕರೆಯಲಾಗಿದೆ. ಆಡಳಿತ ಪಕ್ಷವು ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದೆ” ಎಂದು ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಕಾಂಗ್ರೆಸ್ ಸಂಸದನ ಸೀಟ್‌ನಡಿ ಕಂತೆ ಕಂತೆ ಹಣ ಪತ್ತೆ
ತೆಲಂಗಾಣದಿಂದ(Telangana) ಚುನಾಯಿತರಾಗಿರುವ ಕಾಂಗ್ರೆಸ್(Congress) ಸಂಸದ ಅಭಿಷೇಕ್ ಮನು ಸಿಂಘ್ವಿ(Abhishek Singhvi) ಅವರಿಗೆ ನಿಗದಿಪಡಿಸಲಾದ ಸೀಟ್ ಸಂಖ್ಯೆ 222 ಅಡಿಯಲ್ಲಿ 500 ರೂ. ಮುಖಬೆಲೆಯ ನೋಟುಗಳ ಕಂತೆ ಪತ್ತೆಯಾದ ಆಶ್ಚರ್ಯಕರ ಘಟನೆ ಇತ್ತೀಚೆಗೆ ಸಂಸತ್‌ನಲ್ಲಿ ನಡೆದಿತ್ತು. ತೆಲಂಗಾಣದ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರ ರಾಜ್ಯಸಭೆಯ ಆಸನದಲ್ಲಿ 500 ನೋಟುಗಳ ಬಂಡಲ್ ಪತ್ತೆಯಾದ ಹಿನ್ನೆಲೆಯಲ್ಲಿ ಶುಕ್ರವಾರ(ಡಿ.6) ರಾಜ್ಯಸಭೆಯಲ್ಲಿ ಭಾರೀ ಕೋಲಾಹಲ ಉಂಟಾಗಿತ್ತು.
ಈ ಸುದ್ದಿಯನ್ನೂ ಓದಿ: ಅರವಿಂದ್ ಕೇಜ್ರಿವಾಲ್’ಗೆ ಗೃಹ ಬಂಧನ: ಆಪ್ ಆರೋಪ