ಜೈಪುರ: ರಾಜಸ್ಥಾನದ (Rajasthan) ಭಾಂಕ್ರೋಟಾದ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಪೆಟ್ರೋಲ್ ಪಂಪ್ ಬಳಿ ಎಲ್ಪಿಜಿ ಮತ್ತು ಸಿಎನ್ಜಿ ಟ್ರಕ್ಗಳ ನಡುವೆ ಭಾರಿ ಡಿಕ್ಕಿ ಸಂಭವಿಸಿ ಗ್ಯಾಸ್ ಟ್ರಕ್ ಸ್ಫೋಟಗೊಂಡಿದೆ(Fire Accident). ಅಪಘಾತದ ನಂತರ ಹಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಈವರೆಗೆ 9 ಮಂದಿ ಮೃತಪಟ್ಟಿದ್ದಾರೆ. ವಾಹನಗಳ ಡಿಕ್ಕಿಯಿಂದ ಭಾರೀ ಪ್ರಮಾಣದ ಸ್ಫೋಟ ಸಂಭವಿದ್ದು, ಸ್ಫೋಟದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ. (Jaipur Accident)
जयपुर : गैस टैंकर में धमाके का CCTV आया सामने
— News24 (@news24tvchannel) December 20, 2024
◆ घटना में अब तक 7 लोगों की मौत, 47 लोग घायल #Jaipur | अजमेर रोड | अजमेर राष्ट्रीय राजमार्ग | अजमेर नेशनल | Jaipur pic.twitter.com/iyST5UJJi0
ಸ್ಫೋಟ ಉಂಟಾಗುತ್ತಿದ್ದಂತೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಬೆಂಕಿಯ ಕೆನ್ನಾಲಿ ಹರಡಿದ್ದು, ದಟ್ಟವಾದ ಕಪ್ಪು ಹೊಗೆಯು ಆಕಾಶದಲ್ಲಿ ತುಂಬಿತ್ತು. ಘಟನೆಯಲ್ಲಿ ಕನಿಷ್ಟ 30 ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. 25 ಕ್ಕೂ ಅಧಿಕ ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.
#WATCH | Jaipur, Rajasthan | 4 dead and several injured in a major accident and fire incident in the Bhankrota area.
— ANI (@ANI) December 20, 2024
A fire broke out due to the collision of many vehicles one after the other. Efforts are being made to douse the fire. pic.twitter.com/3WHwok5u8W
ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಮತ್ತು ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಎಸ್ಎಂಎಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, 40 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆತರಲಾದ ಸುಮಾರು ಅರ್ಧದಷ್ಟು ಗಾಯಾಳುಗಳ ಸ್ಥಿತಿ ತುಂಬಾ ಗಂಭೀರವಾಗಿದ್ದು, ಅಪಘಾತ ಸ್ಥಳದಿಂದ ಎಸ್ಎಂಎಸ್ ಆಸ್ಪತ್ರೆಯವರೆಗೆ ‘ಹಸಿರು ಕಾರಿಡಾರ್’ ಅನ್ನು ಸ್ಥಾಪಿಸಲಾಗಿದೆ.
ಈ ಸುದ್ದಿಯನ್ನೂ ಓದಿ : ತರಬೇತಿ ವೇಳೆ ಸ್ಫೋಟ; ರಾಜಸ್ಥಾನದ ಬಿಕಾನೇರ್ನಲ್ಲಿ ಇಬ್ಬರು ಯೋಧರು ಬಲಿ