Thursday, 12th December 2024

ರಾಜಸ್ಥಾನ ಮುಖ್ಯಮಂತ್ರಿ ಬೆಂಗಾವಲು ವಾಹನ ಅಪಘಾತ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಭಜನ್ ಲಾಲ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ನಂತರ ಬೆಂಗಾವಲು ಪಡೆ ಮುಂದೆ ಸಾಗಿತು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸಿಎಂ ಜೈಪುರದಿಂದ ಭರತ್‌ಪುರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಭಜನ್ ಲಾಲ್ ಶರ್ಮಾ ಅವರು ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ತಮ್ಮ ಹುಟ್ಟೂರು ಭರತ್‌ಪುರಕ್ಕೆ ಭೇಟಿ ನೀಡಿದರು.

ಭಜನ್‌ಲಾಲ್ ಶರ್ಮಾ ಅವರು ಟೀ ಅಂಗಡಿಯೊಂದರಲ್ಲಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ನಂತರ ಚಹಾವನ್ನು ತಯಾರಿಸಿ ದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಅವರು ಟೀ ಸ್ಟಾಲ್ ಮಾರಾಟಗಾರ ಮುನ್ಷಿ ಲಾಲ್ ಗುರ್ಜಾರ್ ಅವರೊಂದಿಗೆ ಮಾತನಾಡಿ ಆರ್ಥಿಕ ಸಹಾಯ ನೀಡಿದರು.

ಸಿಎಂ ಭಜನ್ ಲಾಲ್ ಟೀ ತಯಾರಿಸಿ ಕುಡಿದ ಅಂಗಡಿಯವರೂ ಸಂತಸ ವ್ಯಕ್ತಪಡಿಸಿದ್ದಾರೆ.