Thursday, 12th December 2024

ಜೈಪುರ: 30 ನಿಮಿಷಗಳಲ್ಲಿ ಮೂರು ಭಾರಿ ಭೂಕಂಪನ

ಜೈಪುರ: ರಾಜಸ್ತಾನದ ಜೈಪುರದಲ್ಲಿ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಭಾರಿ ಭೂಕಂಪನ ಸಂಭವಿಸಿದ್ದು, ಮಲಗಿದ್ದ ಜನರು ಆತಂಕದಲ್ಲಿ ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಯಾವುದೇ ಪ್ರಾಣಹಾನಿಯಾಗಿಲ್ಲವಾದರೂ ಕೆಲ ಕಟ್ಟಡಗಳು ಬಿರುಕು ಬಿಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರದಲ್ಲೇ ಭೂಕಂಪನದ ಕೇಂದ್ರ ಬಿಂದು ಇದ್ದು ಸುಮಾರು 10 ಕಿಮೀ ಆಳದಲ್ಲಿ ಮೊದಲು ಬೆಳಿಗ್ಗೆ 4.4 ತೀವ್ರತೆಯ ಮೊದಲ ಭೂಕಂಪವು 4:09 ಕ್ಕೆ ದಾಖಲಾಗಿದೆ ನಂತರ 3.1 ರ ತೀವ್ರತೆಯು 4:22 ಕ್ಕೆ ಮತ4:25 ಕ್ಕೆ 3.4 ತೀವ್ರತೆಯ ಭೂಕಂಪ ಸಂಭವಿಸಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದ ಬಗ್ಗೆ ವಿಚಾರಿಸಲು ಜನರು ಪೊಲೀಸರಿಗೆ ಕರೆ ಮಾಡಿದ್ದಾರೆ ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ಮನೆಗಳಿಂದ ಹೊರಗೆ ಬರುತ್ತಿರುವ ಚಿತ್ರಗಳನ್ನು ಹಂಚಿ ಕೊಂಡಿದ್ದಾರೆ.