Monday, 25th November 2024

ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಮಲಯಾಳಂ ಚಲನಚಿತ್ರ ಜಲ್ಲಿಕಟ್ಟು ಆಯ್ಕೆ

ನವದೆಹಲಿ: ಮಲಯಾಳಂನ ಜಲ್ಲಿಕಟ್ಟು ಚಲನಚಿತ್ರ ಭಾರತದಿಂದ ಅಧಿಕೃತವಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.

27 ಚಲನಚಿತ್ರಗಳ ಪೈಕಿ ಜಲ್ಲಿಕಟ್ಟು ಮಲಯಾಳಂ ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಚಲನಚಿತ್ರ ಒಕ್ಕೂಟ ತಿಳಿಸಿದೆ.

ಒಕ್ಕೂಟ ಮುಖ್ಯಸ್ಥ ರಾಹುಲ್ ರಾವೇಲ್, ಪ್ರಾಣಿಗಳಿಗಿಂತ ಮನುಷ್ಯನ ಸ್ವಭಾವ ಕ್ರೂರವಾಗಿದೆ. ಮನುಷ್ಯನ ಪ್ರವೃತ್ತಿಗಳು ಪ್ರಾಣಿ ಗಳಿಗಿಂತ ಕೆಟ್ಟದಾಗಿರುವುದನ್ನು‌ ಚಿತ್ರದಲ್ಲಿ ನೈಜವಾಗಿ ಚಿತ್ರಿಸಲಾಗಿದೆ ಎಂದು ತಿಳಿಸಿದರು. ಈ ಎಲ್ಲ ಅಂಶಗಳನ್ನು ಗಮನ ದಲ್ಲಿಟ್ಟುಕೊಂಡು ಜಲ್ಲಿಕಟ್ಟು ಚಿತ್ರವನ್ನು ಆಯ್ಕೆ ಮಾಡಿರುವುದಾಗಿ ಹೇಳಿದರು. 2019 ರಲ್ಲಿ ಜಲ್ಲಿಕಟ್ಟು ಬಿಡುಗಡೆಯಾಗಿತ್ತು.

ದಿ ಡಿಸೈಪಲ್‌’, ‘ಶಕುಂತಲಾ ದೇವಿ’, ‘ಶಿಕಾರ’, ‘ಛಪಾಕ್’ ‘ಸಿರೀಯಸ್‌ ಮೆನ್‌’, ‘ಚೆಕ್‌ ಪೋಸ್ಟ್‌’ ಸೇರಿದಂತೆ ಹಿಂದಿ, ಮರಾಠಿ ಭಾಷೆಗಳ 27 ಚಿತ್ರಗಳು ಸ್ಪರ್ಧಿಸಿದ್ದವು.‌ ಅಂತಿಮವಾಗಿ ಜಲ್ಲಿಕಟ್ಟು ಚಲನಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.