Thursday, 19th September 2024

ಜನ್ ಆಕ್ರೋಶ್ ಯಾತ್ರೆ: ಉಲ್ಟಾ ಹೊಡೆದ ರಾಜಸ್ಥಾನ ಬಿಜೆಪಿ

ಜೈಪುರ: ಜಾಗತಿಕವಾಗಿ ಕರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಆ ಕಾರಣಕ್ಕಾಗಿ ರಾಜಸ್ಥಾನದಲ್ಲಿ ಜನ್ ಆಕ್ರೋಶ್ ಯಾತ್ರೆ ರದ್ದುಪಡಿಸಲಾಗಿದೆ ಎಂದು ಬಿಜೆಪಿ ಹೇಳಿ ದ್ದರೂ, ಕೆಲವೇ ಗಂಟೆಗಳಲ್ಲಿ ರಾಜಸ್ಥಾನ ಬಿಜೆಪಿ ಉಲ್ಟಾ ಹೊಡೆದಿದೆ.

ಜನ್ ಆಕ್ರೋಶ್ ಯಾತ್ರೆಯನ್ನು ಕೋವಿಡ್ ಮಾರ್ಗದರ್ಶಿ ನಿಯಮಗಳನ್ನು ಪಾಲಿಸುವು ದರೊಂದಿಗೆ ನಡೆಸಲಾಗುವುದು ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಡಿಸೆಂಬರ್ 1ರಂದು ಜನ್ ಆಕ್ರೋಶ್ ಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ದ್ದರು.

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಜನ್ ಆಕ್ರೋಶ್ ಯಾತ್ರೆ ರದ್ದುಗೊಳಿಸಲಾಗುತ್ತಿದೆ. ಬಿಜೆಪಿಗೆ ಜನರೇ ಮೊದಲು, ಆ ಮೇಲೆ ರಾಜಕಾರಣ. ನಮಗೆ ಜನರ ಸುರಕ್ಷತೆ ಮತ್ತು ಅವರ ಆರೋಗ್ಯ ಮಹತ್ವದ್ದಾ ಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಹೇಳಿದ್ದರು.

ಕಾಂಗ್ರೆಸ್‌ನ ದುರಾಡಳಿತ ವಿರುದ್ಧ ಬಿಜೆಪಿಯ ಜನ್ ಆಕ್ರೋಶ್ ಯಾತ್ರೆಯು ನಿಗದಿಯಂತೆ ಮುಂದುವರಿಯಲಿದೆ. ನಾವು ಎರಡು ಕೋಟಿ ಜನರನ್ನು ರೀಚ್ ಆಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Read E-Paper click here