Sunday, 15th December 2024

ಕಾರ್‌-ಟ್ರಕ್‌ ಅಪಘಾತ: ಆರು ಜನರ ಸಾವು

ಜಾನ್‌ ಪುರ್‌(ತ್ತರ ಪ್ರದೇಶ): ಕಾರ್‌ ಮತ್ತು ಟ್ರಕ್‌ ನಡುವೆ ಭಾನುವಾರ ಸಂಭವಿಸಿದ ಅಪಘಾತವೊಂದರಲ್ಲಿ ಆರು ಜನ ಮೃತಪಟ್ಟಿರುವ ಘಟನೆ ಜಾನ್‌ ಪುರ್‌ ಜಿಲ್ಲೆಯಲ್ಲಿ ನಡೆದಿದೆ.

ಒಂಬತ್ತು ಮಂದಿ ಗುಂಪು ಪ್ರಯಾಗರಾಜ್‌ ಗೆ ಪ್ರಯಾಣಿಸುತ್ತಿರುವ ವೇಳೆ ಈ ಅಪಘಾತ ಸಂಭವಿಸಿದ್ದು ಒಂದು ಮಗುವೂ ಸಹ ಸಾವನ್ನಪ್ಪಿದೆ.

ಮೃತರ ಪೈಕಿ ಇಬ್ಬರು ಸ್ತ್ರೀಯರು ಹಾಗೂ ನಾಲ್ವರು ಪುರುಷರಾಗಿದ್ದು ಅವರನ್ನು ಗಜಧರ್‌ ಶರ್ಮಾ ( 60), ಅನಿಶ್‌ ಶರ್ಮಾ (35) , ಜವಾಹರ್‌ ಶರ್ಮಾ (57) ಮತ್ತು ಅವರ 17 ವರ್ಷದ ಪುತ್ರ ಹಾಗೂ ಸೋನಮ್‌ (34) , ರಿಂಕು (32) ಎಂದು ಗುರುತಿಸಲಾಗಿದೆ.

ಮಿಕ್ಕ ಮೂವರೂ ಸಹ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಟ್ರಕ್‌ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.