ನವದೆಹಲಿ: ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಸಂಸದರ ನಡುವಿನ ಸಮರ ತಾರಕ್ಕೇರಿದೆ. ಸಂಸತ್ ಭವನದ ಎದರು ನಡೆದ ಗಲಾಟೆಯಲ್ಲಿ ಇಬ್ಬರು ಸಂಸದರು ಗಾಯಗೊಂಡಿದ್ದು, ರಾಹುಲ್ ಗಾಂಧಿ (Rahul Gandhi) ತಳ್ಳಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ. ಇದೀಗ ಸಮಾಜವಾದಿ ಪಕ್ಷದ (Samajwadi Party) ಸಂಸದ ಜಯಾ ಬಚ್ಚನ್ (Jaya Bachchan) ಶುಕ್ರವಾರ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ bijepi ಸಂಸದರು “ನಾಟಕ” ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ವಿರುದ್ಧದ ಪ್ರತಿಭಟನಾ ಮೆರವಣಿಗೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಾ ಬಚ್ಚನ್, ಬಿಜೆಪಿ ಸಂಸದರು ತಮ್ಮ ನಟನೆಗಾಗಿ ಪ್ರಶಸ್ತಿ ನೀಡಬೇಕು ಎಂದು ಹೇಳಿದರು. ಬಿಜೆಪಿ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ, ಮುಖೇಶ್ ರಜಪೂತ್ ಮತ್ತು ಎಸ್ ಫಾಂಗ್ನಾನ್ ಕೊನ್ಯಾಕ್ ಅವರಿಗಿಂತ ಉತ್ತಮ ಅಭಿನಯವನ್ನು ಮಾಡುವವರನ್ನು ನಾನೊಬ್ಬ ನಟಿಯಾಗಿ ನನ್ನ ವೃತ್ತಿ ಜೀವನದಲ್ಲಿ ನೋಡಿಲ್ಲ ಎಂದು ಹೇಳಿದ್ದಾರೆ.
Delhi: SP MP Jaya Bachchan says, "Sarangi Ji is acting… It's all useless. We were all going inside the House, and the way they were standing; not allowing us to enter… Both Rajput Ji, Sarangi Ji, and the woman from Nagaland have given better performances than I ever have in… pic.twitter.com/7BbtZ2tZGZ
— IANS (@ians_india) December 20, 2024
ಸಾರಂಗಿ, ರಜಪೂತ್ ಹಾಗೂ ನಾಗಾಲ್ಯಾಂಡ್‌ನ ಮಹಿಳಾ ಸಂಸದರು ನಾಟಕ ಮಾಡುತ್ತಿದ್ದಾರೆ. ನಾನು ನನ್ನ ವೃತ್ತಿಜೀವನದಲ್ಲಿ ಇಂತಹ ನಟರನ್ನು ನಾನು ನೋಡಿಲ್ಲ. ಅವರ ನಟನೆಗೆ ಎಲ್ಲಾ ಪ್ರಶಸ್ತಿಗಳನ್ನು ಅವರಿಗೆ ನೀಡಬೇಕು ಎಂದು ಹೇಳಿದ್ದಾರೆ.
ʼʼನಾವೆಲ್ಲರೂ ಮೆಟ್ಟಿಲುಗಳ ಬಳಿ ಇದ್ದೆವು, ಏಕಾಏಕಿ ಅವರು ತಮ್ಮ ನಾಟಕ ಪ್ರಾರಂಭ ಮಾಡಿದರು. ಪ್ರತಾಪ್ ಸಾರಂಗಿ ಮೆಟ್ಟಿಲುಗಳಿಂದೆ ಕೆಳಗೆ ಬಿದ್ದೆ, ರಾಹುಲ್ ಗಾಂಧಿ ತನ್ನನ್ನು ತಳ್ಳಿದ್ದಾರೆ ಎಂದು ಆರೋಪಿಸಿದರು. ಮತ್ತೊಬ್ಬ ಸಂಸದ ಮುಖೇಶ್ ರಜಪೂತ್‌ಗೆ ಮೊದಲು ಸಣ್ಣ ಗಾಯವಾಗಿತ್ತು. ನಂತರ ದೊಡ್ಡ ಬ್ಯಾಂಡೇಜ್ ಹಾಕಿಕೊಂಡು ಬಂದರು. ಇದೀಗ ಐಸಿಯುನಲ್ಲಿ ಚಿಕಿತ್ಸೆ ಎನ್ನಲಾಗುತ್ತಿದೆ. ಇದೆಲ್ಲ ಬರೀ ನಾಟಕʼʼ ಎಂದು ಜಯಾ ಹೇಳಿದ್ದಾರೆ.
ಬಿಜೆಪಿ ತಿರುಗೇಟು
ಎಸ್‌ಪಿ ಸಂಸದ ಜಯಾ ಬಚ್ಚನ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ, ಇದು ಎಸ್‌ಪಿ ಮತ್ತು ಆಪ್‌ನ ಇಂಡಿಯಾ ಬ್ಲಾಕ್‌ನ “ನಿಜವಾದ ಸಂಸ್ಕೃತಿ” ಎಂದು ಹೇಳಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಮಾತನಾಡಿ, ʼʼಬಚ್ಚನ್ ಅವರು ಆಕ್ರಮಣಕಾರಿಯನ್ನು ಬೆಂಬಲಿಸುತ್ತಿದ್ದಾರೆಯೇ ಹೊರತು ಸಂತ್ರಸ್ತರನ್ನಲ್ಲʼʼ ಎಂದು ಹೇಳಿದ್ದಾರೆ.
ʼʼರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಿರುವ ಬುಡಕಟ್ಟು ಮಹಿಳಾ ಸಂಸದೆಯ ಜತೆ ನಿಲ್ಲುವ ಬದಲು, ಮಹಿಳಾ ಸಂಸದೆಯನ್ನೇ ಇವರು ಪ್ರಶ್ನೆ ಮಾಡುತ್ತಾರೆ. ಒಬ್ಬ ಮಹಿಳಾ ಸಂಸದೆಯಾಗಿ ಇನ್ನೊಬ್ಬ ಮಹಿಳೆಯ ಪರ ನಿಲ್ಲುವುದನ್ನು ಬಿಟ್ಟು ಹೀಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼಕೋನ್ಯಾಕ್ ವಿರುದ್ಧ ಬಚ್ಚನ್ ಅವರ ಹೇಳಿಕೆಗಳು ಪ್ರತಿಪಕ್ಷಗಳಿಗೆ ಬುಡಕಟ್ಟು ಸಮುದಾಯ ಮತ್ತು ಮಹಿಳೆಯರ ಬಗ್ಗೆ ಯಾವುದೇ ಗೌರವವಿಲ್ಲ ಎಂಬುದನ್ನು ತೋರಿಸುತ್ತದೆʼʼ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ : Rahul Gandhi : ಲೋಕಸಭೆಯಲ್ಲಿ ಸಾವರ್ಕರ್ ವಿಷಯ ಉಲ್ಲೇಖಿಸಿ ರಾಹುಲ್ ಗಾಂಧಿ ವಾಗ್ದಾಳಿ!