Friday, 22nd November 2024

ಜಾರ್ಖಂಡ್‌ನ‌ಲ್ಲಿ ಮೊದಲ ಬೋಟ್‌ Ambulance ಸೇವೆಗೆ ಸಿದ್ಧ

ರಾಂಚಿ: ಗಂಗಾನದಿ ತೀರದ ಜನರಿಗೆ ಆರೋಗ್ಯ ಸೇವೆಯನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ಜಾರ್ಖಂಡ್‌ನ‌ಲ್ಲಿ ಮೊದಲ ಬೋಟ್‌ ಆಯಂಬುಲೆನ್ಸ್‌ ಸೇವೆಗೆ ಸಿದ್ಧವಾಗಿದೆ. ಮುಂದಿನ ವಾರದಿಂದಲೇ ಸೇವೆ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಗಾನದಿ ದಂಡೆ ಸಮೀಪದ ಪ್ರದೇಶಗಳಾದ ಡಯಾರಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮುಂಗಾರಿನ ಸಂದರ್ಭದಲ್ಲಿ ತೀವ್ರ ಅವ್ಯವಸ್ಥೆ ಎದುರಾಗುತ್ತಿತ್ತು. ಅಲ್ಲದೇ, ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು ಸಮಸ್ಯೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬೋಟ್‌ ಆಯಂಬುಲೆನ್ಸ್‌ ಒದಗಿಸಲಾಗುತ್ತಿದೆ.

ಮೇ 15ರಂದು ಸಾಹಿಬ್‌ ಗಂಜ್‌ನಿಂದ ಸೇವೆ ಆರಂಭಗೊಳ್ಳಲಿದ್ದು, ಪ್ರತಿ ಬೋಟ್‌ಗೆ 48 ಲಕ್ಷ ರೂ. ವೆಚ್ಚವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.