ರಾಂಚಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಜಾರ್ಖಾಂಡ್ ರಾಜ್ಯದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಶಾಸಕ ದೇಶದಲ್ಲಿಯೇ ಅತಿದೊಡ್ಡ ಹನುಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕ ಇರ್ಫಾನ್ ಅನ್ಸಾರಿ, ತಮ್ಮ ವಿಧಾನಸಭಾ ಕ್ಷೇತ್ರ ಜಮ್ತಾರಾದಲ್ಲಿ ದೇಶದ ಅತಿದೊಡ್ಡ ಹನುಮಾನ್ ಮಂದಿರ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಪಕ್ಷವು ಬಹುಮತದಿಂದ ಗೆಲುವು ಸಾಧಿಸಿರುವುದು ಹನುಮಂತನ ಮೇಲಿನ ನನ್ನ ನಂಬಿಕೆ ಹೆಚ್ಚಾಗುವಂತೆ ಮಾಡಿದೆ. ಹನುಮಂತ ಎಲ್ಲರಿಗೂ ಸೇರಿದವನು. ಪಕ್ಷದ ಗೆಲುವು ಬಳಿಕ ಹನುಮಂತನ ದೇವಸ್ಥಾನಕ್ಕೆ ತೆರಳಿದೆ ಎಂದು ಅನ್ಸಾರಿಯವರು ಹೇಳಿ ದ್ದಾರೆ.
ದೇವಸ್ಥಾನ ನಿರ್ಮಾಣಕ್ಕೆ ಹಣ ಹೊಂದಿಸುವ ಕುರಿತ ಪ್ರಶ್ನೆಗೆ ಉತ್ತರಿಸಿ, ನನ್ನ ಕಿಡ್ನಿ ಮಾರಿಯಾದರೂ ದೇವಸ್ಥಾನ ನಿರ್ಮಾಣ ಮಾಡುತ್ತೇನೆಂದು ತಿಳಿಸಿದರು. ಈಗಾಗಲೇ ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಗುರ್ತಿಸ ಲಾಗಿದೆ. ಶೀಘ್ರದಲ್ಲಿಯೇ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.