Thursday, 19th September 2024

Job Cut: ಆಗಸ್ಟ್ ತಿಂಗಳಲ್ಲಿ 27 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಟೆಕ್ ದೈತ್ಯ ಕಂಪೆನಿಗಳು

Job Cut

ಟೆಕ್ ದೈತ್ಯ ಕಂಪೆನಿಗಳಲ್ಲಿ (Tech giant) ಕೆಲಸ ಮಾಡುವ ಉದ್ಯೋಗಿಗಳಿಗೆ ಈಗ ಉದ್ಯೋಗ ಕಡಿತದ (Job Cut) ಆತಂಕ ಹೆಚ್ಚಾಗಿದೆ. ಯಾಕೆಂದರೆ ಇಂಟೆಲ್ (Intel), ಸಿಸ್ಕೋ (Cisco), ಐಬಿಎಂ ( IBM), ಆಪಲ್ (Apple) ಸೇರಿದಂತೆ 40 ಕ್ಕೂ ಹೆಚ್ಚು ಟೆಕ್ ದೈತ್ಯ ಕಂಪೆನಿಗಳು ಆಗಸ್ಟ್ ನಲ್ಲಿ 27,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ವರ್ಷದಲ್ಲಿ ಹಲವು ಪ್ರಮುಖ ಕಂಪೆನಿಗಳು ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿವೆ.

ಇಂಟೆಲ್, ಐಬಿಎಂ, ಸಿಸ್ಕೊ ಸೇರಿದಂತೆ ಬಹು ದೊಡ್ಡ 40ಕ್ಕೂ ಹೆಚ್ಚು ಕಂಪೆನಿಗಳು 27,000ಕ್ಕೂ ಹೆಚ್ಚು ಉದ್ಯೋಗಿ ಗಳನ್ನು ವಜಾ ಮಾಡಿರುವುದಾಗಿ ಘೋಷಿದೆ. ಇದರಿಂದ ಇನ್ನು ಹಲವು ಟೆಕ್ ಕಂಪೆನಿಗಳು ಆಗಸ್ಟ್ ತಿಂಗಳಲ್ಲಿ ತ್ವರಿತ ವೇಗದಲ್ಲಿ ಉದ್ಯೋಗಗಳನ್ನು ಕಡಿತಗೊಳಿಸಿದವು.

2024ರಲ್ಲಿ ಈವರೆಗೆ 422 ಕಂಪೆನಿಗಳು 1,36,000ಕ್ಕೂ ಹೆಚ್ಚು ಟೆಕ್ ಕೆಲಸಗಾರರನ್ನು ವಜಾಗೊಳಿಸಿವೆ. ಇದರಲ್ಲಿ ಪ್ರಮುಖ ಟೆಕ್ ಕಂಪೆನಿಗಳ ಮಾಹಿತಿ ಇಲ್ಲಿದೆ.

Job Cut

ಇಂಟೆಲ್

ಕಂಪೆನಿಯು 15,000 ಉದ್ಯೋಗ ಕಡಿತವನ್ನು ಘೋಷಿಸಿತು. ಇದು ಒಟ್ಟು ಉದ್ಯೋಗಿಗಳ ಪೈಕಿ ಶೇ. 15ಕ್ಕಿಂತ ಹೆಚ್ಚಿದೆ. 2025ಕ್ಕೆ 10 ಶತಕೋಟಿ ಡಾಲರ್ ವೆಚ್ಚ ಕಡಿತ ಯೋಜನೆಯ ಭಾಗವಾಗಿ ಈ ಉದ್ಯೋಗ ಕಡಿತ ಮಾಡಿರುವುದಾಗಿ ಕಂಪೆನಿ ಹೇಳಿಕೊಂಡಿದೆ. ಕಂಪೆನಿಯ ವಾರ್ಷಿಕ ಆದಾಯವು 2020 ಮತ್ತು 2023ರ ನಡುವೆ 24 ಶತಕೋಟಿ ಡಾಲರ್ ನಷ್ಟು ಕುಸಿದಿದೆ.

ಈ ಕುರಿತು ಮಾತನಾಡಿರುವ ಕಂಪೆನಿಯ ಸಿಇಒ ಪ್ಯಾಟ್ ಗೆಲ್ಸಿಂಗರ್, 25 ವರ್ಷಗಳ ಹಿಂದೆ ಸಿಪಿಯು ಚಿಪ್ ಕ್ರಾಂತಿ ಯಲ್ಲಿ ನಮ್ಮ ನಾಯಕತ್ವದ ಹೊರತಾಗಿಯೂ ಇಂಟೆಲ್‌ನ ಆದಾಯದ ಬೆಳವಣಿಗೆಯ ಕೊರತೆಯು ಹೆಚ್ಚಿನ ವೆಚ್ಚಗಳು ಮತ್ತು ಕಡಿಮೆ ಮಾರ್ಜಿನ್‌ಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಸಿಸ್ಕೊ ​​ಸಿಸ್ಟಮ್ಸ್

ಕಂಪೆನಿಯು ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಅದರ ಜಾಗತಿಕ ಉದ್ಯೋಗಿಗಳ ಪ್ರಮಾಣದ ಶೇ. 7ರಷ್ಟಾಗಿದೆ. ಎಐ ಮತ್ತು ಸೈಬರ್ ಸುರಕ್ಷತೆಯ ಮೇಲೆ ಗಮನ ಕೇಂದ್ರೀಕರಿಸುತ್ತಿರುವ ಕಂಪೆನಿಯು ಈ ವರ್ಷ ಎರಡನೇ ಪ್ರಮುಖ ಸುತ್ತಿನ ಉದ್ಯೋಗ ಕಡಿತವನ್ನು ಘೋಷಿಸಿದೆ.

ನೆಟ್‌ವರ್ಕಿಂಗ್ ಉಪಕರಣಗಳಿಗೆ ಬೇಡಿಕೆಯನ್ನು ಮರುಕಳಿಸುವ ಬಗ್ಗೆ ಸಿಸ್ಕೊ ​​ಆಶಾವಾದಿಯಾಗಿದೆ ಎಂದು ಕಂಪೆನಿ ಸಿಇಒ ಚಕ್ ರಾಬಿನ್ಸ್ ಹೇಳಿದ್ದಾರೆ.

Job Cut

ಐಬಿಎಂ

ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಾಚರಣೆಗಳಲ್ಲಿ ಚೀನಾದಲ್ಲಿ ಐಬಿಎಂ 1,000 ಉದ್ಯೋಗಿಗಳನ್ನು ವಜಾ ಗೊಳಿಸಲು ನಿರ್ಧರಿಸಿತ್ತು. ಆದರೆ ಇದನ್ನು ತಡೆಹಿಡಿದಿದೆ. ಐಬಿಎಂ ಈಗ ಖಾಸಗಿ ಉದ್ಯಮಗಳಿಗೆ ಸೇವೆ ಸಲ್ಲಿಸಲು ಆದ್ಯತೆ ನೀಡುತ್ತಿದ್ದು ಚೀನಾದ ಮಾರುಕಟ್ಟೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳನ್ನು ಆಯ್ಕೆ ಮಾಡುತ್ತಿದೆ ಎಂದು ಕಂಪೆನಿ ಹೇಳಿದೆ.

ಇನ್ಫಿನಿಯನ್

ಜರ್ಮನ್ ಚಿಪ್‌ಮೇಕರ್ 1,400 ಉದ್ಯೋಗಗಳನ್ನು ಕಡಿತಗೊಳಿಸಿತು. ಮಾರುಕಟ್ಟೆಗಳಲ್ಲಿ ನಿಧಾನಗತಿಯ ಚೇತರಿಕೆಯು ದೀರ್ಘಕಾಲದ ದುರ್ಬಲಗೊಂಡಿರುವ ಆರ್ಥಿಕ ವೇಗ ಮತ್ತು ಹೆಚ್ಚುವರಿ ದಾಸ್ತಾನು ಮಟ್ಟಗಳಿಂದಾಗಿ ಕಂಪೆನಿಯು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಎಂದು ಸಿಇಒ ಜೋಚೆನ್ ಹ್ಯಾನೆಬೆಕ್ ಹೇಳಿದ್ದಾರೆ.

Job Cut

ಗೋ ಪ್ರೊ

ಆಕ್ಷನ್ ಕೆಮರಾ ತಯಾರಕರು ಶೇ. 15ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಿದೆ. ಸುಮಾರು 140 ಉದ್ಯೋಗಿಗಳನ್ನು ವಜಾಗೊಳಿಸಿರುವುದರಿಂದ 50 ಮಿಲಿಯನ್‌ ಡಾಲರ್ ಗಳಷ್ಟು ವೆಚ್ಚ ಕಡಿಮೆಯಾಗಲಿದೆ ಎಂದು ಕಂಪೆನಿ ಹೇಳಿದೆ.

ಆಪಲ್

ಆಪಲ್ ಬುಕ್ಸ್ ಅಪ್ಲಿಕೇಶನ್ ಮತ್ತು ಆಪಲ್ ಬುಕ್ ಸ್ಟೋರ್ ತಂಡಗಳನ್ನು ಒಳಗೊಂಡಿರುವ ತನ್ನ ಸೇವೆಗಳ ಗುಂಪಿನಿಂದ ಸುಮಾರು 100 ಉದ್ಯೋಗಿಗಳನ್ನು ಆಪಲ್ ವಜಾಗೊಳಿಸಿದೆ. ಹಿಂದೆ ಕಂಪೆನಿಯು ತನ್ನ ವಿಶೇಷ ಯೋಜನೆಗಳ ಗುಂಪಿನಿಂದ 600 ಉದ್ಯೋಗಿಗಳನ್ನು ಕಡಿತಗೊಳಿಸಿತ್ತು. ಜನವರಿಯಲ್ಲಿ ಸ್ಯಾನ್ ಡಿಯಾಗೋದಲ್ಲಿ 121 ವ್ಯಕ್ತಿಗಳ ಎಐ ತಂಡವನ್ನು ಮುಚ್ಚಿತು.

Job Cut

Indian Premier League : ಐಪಿಎಲ್ ಉದ್ಯಮ ಮೌಲ್ಯ ಕುಸಿತ; ಮಹಿಳಾ ಪ್ರೀಮಿಯರ್ ಲೀಗ್‌ನ ಮೌಲ್ಯ ಏರಿಕೆ!

ಡೆಲ್ ಟೆಕ್ನಾಲಜೀಸ್

ಕಂಪೆನಿಯು ಸುಮಾರು 12,500 ಉದ್ಯೋಗಿಗಳನ್ನು ಅಂದರೆ ಅದರ ಜಾಗತಿಕ ಉದ್ಯೋಗಿಗಳ ಶೇ. 10 ರಷ್ಟನ್ನು ವಜಾಗೊಳಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಕಂಪೆನಿಯು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.