ಬೆಂಗಳೂರು: ಭಾರತೀಯ ನೌಕೌಪಡೆಗಾಗಿ ಯುದ್ಧ ಹಡಗು, ಸಬ್ ಮರೀನ್ ಇತ್ಯಾದಿ ನಿರ್ಮಿಸುವ ಮುಂಬೈಯ ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (Mazagon Dock Shipbuilders Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Mazagon Dock Recruitment 2024). ಚಿಪ್ಪರ್ ಗ್ರೈಂಡರ್, ವೆಲ್ಡರ್, ಎಲೆಕ್ಟ್ರಿಶಿಯನ್, ಫಿಟ್ಟರ್ ಸೇರಿ ಸುಮಾರು 234 ಹುದ್ದೆ ಖಾಲಿ ಇದೆ. ಉದ್ಯೋಗ ಸ್ಥಳ: ಮುಂಬೈ. ಎಸ್ಸೆಸ್ಸೆಲ್ಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಇತ್ಯಾದಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಡಿ. 16 (Job Guide).
ಹುದ್ದೆಗಳ ವಿವರ
ಚಿಪ್ಪರ್ ಗ್ರೈಂಡರ್ – 6 ಹುದ್ದೆ
ಕಾಂಪೋಸಿಟ್ ವೆಲ್ಡರ್ – 27 ಹುದ್ದೆ
ಎಲೆಕ್ಟ್ರಿಕ್ ಕ್ರೇನ್ ಆಪರೇಟರ್‌ಗಳು – 7 ಹುದ್ದೆ
ಎಲೆಕ್ಟ್ರಿಷಿಯನ್ – 24 ಹುದ್ದೆ
ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 10 ಹುದ್ದೆ
ಫಿಟ್ಟರ್ – 14 ಹುದ್ದೆ
ಗ್ಯಾಸ್ ಕಟ್ಟರ್ – 10 ಹುದ್ದೆ
ಜೂನಿಯರ್ ಹಿಂದಿ ಭಾಷಾಂತರಕಾರ – 1 ಹುದ್ದೆ
ಜೂನಿಯರ್ ಡ್ರಾಫ್ಟ್‌ಮ್ಯಾನ್ (ಮೆಕ್ಯಾನಿಕಲ್) – 10 ಹುದ್ದೆ
ಜೂನಿಯರ್ ಡ್ರಾಫ್ಟ್‌ಮ್ಯಾನ್ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್) – 3 ಹುದ್ದೆ
ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಇನ್ಸ್‌ಪೆಕ್ಟರ್ (ಮೆಕ್ಯಾನಿಕಲ್)- 7 ಹುದ್ದೆ
ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಇನ್ಸ್‌ಪೆಕ್ಟರ್ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್)- 3 ಹುದ್ದೆ
ಮಿಲ್ ರೈಟ್ ಮೆಕ್ಯಾನಿಕ್ – 6 ಹುದ್ದೆ
ಮೆಷಿನಿಸ್ಟ್ – 8 ಹುದ್ದೆ
ಜೂನಿಯರ್ ಪ್ಲ್ಯಾನರ್ ಎಸ್ಟಿಮೇಟರ್ (ಮೆಕ್ಯಾನಿಕಲ್) – 5 ಹುದ್ದೆ
ಜೂನಿಯರ್ ಪ್ಲ್ಯಾನರ್ ಎಸ್ಟಿಮೇಟರ್ (ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್) – 1 ಹುದ್ದೆ
ರಿಗ್ಗರ್ – 15 ಹುದ್ದೆ
ಸ್ಟೋರ್ ಕೀಪರ್/ಸ್ಟೋರ್ ಸಿಬ್ಬಂದಿ – 8 ಹುದ್ದೆ
ಸ್ಟ್ರಕ್ಚರಲ್ ಫ್ಯಾಬ್ರಿಕೇಟರ್ – 25 ಹುದ್ದೆ
ಯುಟಿಲಿಟಿ ಹ್ಯಾಂಡ್ – 6 ಹುದ್ದೆ
ವುಡ್ ವರ್ಕ್ ಟೆಕ್ನಿಷಿಯನ್ (ಕಾರ್ಪೆಂಟರ್) – 5 ಹುದ್ದೆ
ಅಗ್ನಿಶಾಮಕ ದಳ ಸಿಬ್ಬಂದಿ – 12 ಹುದ್ದೆ
ಯುಟಿಲಿಟಿ ಹ್ಯಾಂಡ್ (ಸೆಮಿ ಸ್ಕಿಲ್ಡ್) – 18 ಹುದ್ದೆ
ಮಾಸ್ಟರ್ (1st Class)- 2 ಹುದ್ದೆ
ಲೈಸನ್ಸ್ ಆಕ್ಟ್ ಎಂಜಿನಿಯರ್ – 1 ಹುದ್ದೆ
ವಯೋಮಿತಿ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 18-48 ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಾಜಿ ಸೈನಿಕರಿಗೆ ಅರ್ಜಿ ಶುಲ್ಕವಿಲ್ಲ. ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 350 ರೂ. ಪಾವತಿಸಬೇಕು. ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್/ಟ್ರೇಡ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://www.mazagondock.in/app/MDLJobPortal/Login.aspx?msg=n)
- ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
- ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಸರಿಯಾದ ಅಳತೆಯಲ್ಲಿ ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದವರು ಮಾತ್ರ).
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ: mazagondock.inಗೆ ಭೇಟಿ ನೀಡಿ ಅಥವಾ 022-23764140/4123/4125/4141 ನಂಬರ್‌ಗೆ ಕರೆ ಮಾಡಿ.
ಈ ಸುದ್ದಿಯನ್ನೂ ಓದಿ: CDAC Recruitment 2024: CDACನಲ್ಲಿದೆ ಬರೋಬ್ಬರಿ 949 ಹುದ್ದೆ; ಐಟಿಐ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಿ