ಬೆಂಗಳೂರು: ಪದವಿ ಮುಗಿಸಿ ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗುಡ್‌ನ್ಯೂಸ್. ಅದೂ ಅಲ್ಲದೆ ಪರೀಕ್ಷೆ ಬರೆಯದೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಹೌದು, ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ (Air India Air Transport Services Limited) ತನ್ನಲ್ಲಿ ಖಾಲಿ ಇರುವ 145 ಆಫೀಸರ್ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು (AIATSL Recruitment 2025). ಉದ್ಯೋಗದ ಸ್ಥಳ: ಮಹಾರಾಷ್ಟ್ರದ ಮುಂಬೈ. ಆಸಕ್ತರು 2025ರ ಜ. 6ರಿಂದ 8ರ ತನಕ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು (Job Guide).
ಉದ್ಯೋಗದ ವಿವರ ಮತ್ತು ವಿದ್ಯಾರ್ಹತೆ
ಆಫೀಸರ್ (ಸೆಕ್ಯೂರಿಟಿ) – 65 ಹುದ್ದೆ, ಜೂನಿಯರ್ ಆಫೀಸರ್ (ಸೆಕ್ಯೂರಿಟಿ)- 80 ಹುದ್ದೆಗಳಿಗೆ. ದೇಶಾದ್ಯಂತ ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಅಭ್ಯರ್ಥಿಗಳ ಗರಿಷ್ಠ ವಯಸ್ಸು (ಆಫೀಸರ್-ಸೆಕ್ಯೂರಿಟಿ) 50 ವರ್ಷ ಮತ್ತು ಜೂನಿಯರ್ ಆಫೀಸರ್ (ಸೆಕ್ಯೂರಿಟಿ) 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ/ಮಾಜಿ ಯೋಧರು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಉಳಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಗ್ರೂಪ್ ಡಿಸ್ಕಷನ್/ಇಂಗ್ಲಿಷ್ ಪ್ರೊಫಿಶ್ಯಿಯೆನ್ಸಿ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಆಫೀಸರ್ (ಸೆಕ್ಯೂರಿಟಿ) – 45,000 ರೂ. ಮತ್ತು ಜೂನಿಯರ್ ಆಫೀಸರ್ (ಸೆಕ್ಯೂರಿಟಿ)-29,760 ರೂ. ಮಾಸಿಕ ವೇತನ ದೊರೆಯಲಿದೆ. ಇದು 3 ವರ್ಷಗಳ ಕ್ರಾಂಟ್ಯಾಕ್ಟ್ ಆಧಾರಿತ ಉದ್ಯೋಗವಾಗಿದ್ದು, ಮುಂದುವರಿಸುವ ಅವಕಾಶವಿದೆ.
AIATSL Recruitment 2025 ಅಧಿಸೂಚನೆ ಮತ್ತು ಅಪ್ಲಿಕೇಷನ್ ಫಾರಂಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಸಕ್ತರು ಈ ಕೆಳಗಿನ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು:
AI Airport Services Limited, GSD Complex, CSMI Airport, Near CISF Gate No.5, Sahar, Andheri East, Mumbai-400099.
ಸಂದರ್ಶನದ ದಿನಾಂಕ
ಆಫೀಸರ್ (ಸೆಕ್ಯೂರಿಟಿ) ಹುದ್ದೆಗೆ ಸೇರ ಬಯಸುವವರು 2025ರ ಜ. 6 ಮತ್ತು 7ರಂದು ಹಾಗೂ ಜೂನಿಯರ್ ಆಫೀಸರ್ ಸೆಕ್ಯೂರಿಟಿ ಹುದ್ದೆಗೆ ಸೇರ ಬಯಸುವವರು 2025ರ ಜ. 8ರಂದು ಸಂದರ್ಶನಕ್ಕೆ ಹಾಜರಾಗಬೇಕು. ಈ ವೇಳೆ ಭರ್ತಿ ಮಾಡಿದ ಅರ್ಜಿಯನ್ನು ಕೊಂಡೊಯ್ಯಬೇಕು.
ಸಂದರ್ಶನಕ್ಕೆ ಹಾಜರಾಗುವ ವೇಳೆ ಈ ಎಲ್ಲ ದಾಖಲೆ ನಿಮ್ಮಲ್ಲಿರಲಿ
ಅರ್ಜಿ ಶುಲ್ಕ ಪಾವತಿಯ ರಸೀದಿ (ಅನ್ವಯವಾಗುತ್ತಿದ್ದರೆ ಮಾತ್ರ), ಸ್ಕೂಲ್ ಲೀವಿಂಗ್ ಸರ್ಟಿಫಿಕೆಟ್, ಶೈಕ್ಷಣಿಕ ಪ್ರಮಾಣ ಪತ್ರ, ಪದವಿ ಪ್ರಮಾನ ಪತ್ರ, ಪ್ಯಾನ್, ಆಧಾರ್ ಕಾರ್ಡ್ ಇತ್ಯಾದಿ.
ಈ ಸುದ್ದಿಯನ್ನೂ ಓದಿ: IPPB Recruitment 2024: ಅಂಚೆ ಬ್ಯಾಂಕ್‌ನಲ್ಲಿ ವಿಶೇಷ ಹುದ್ದೆಗಳಿಗೆ ಅರ್ಜಿ ಆಹ್ವಾನ, ಹೀಗೆ ಅರ್ಜಿ ಸಲ್ಲಿಸಿ