Sunday, 5th January 2025

Joe Biden: ಪ್ರಧಾನಿ ಮೋದಿಯಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪತ್ನಿಗೆ ದುಬಾರಿ ವಜ್ರ ಗಿಫ್ಟ್‌ !

Joe Biden

ವಾಷಿಂಗ್ಟನ್‌: ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬಿಡನ್‌ (Joe Biden) ಅವರು ಹಾಗೂ ಅವರ ಕುಟುಂಬ ವಿವಿಧ ದೇಶಗಳ ನಾಯಕರಿಂದ ಬೆಲೆ ಬಾಳುವ ಸಾವಿರಾರು ಡಾಲರ್ ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೀಡಿದ ಉಡುಗೊರೆ ಅತ್ಯಂತ ದುಬಾರಿಯಾಗಿದ್ದು ಎನ್ನಲಾಗಿದೆ.

ಮೋದಿ 2023ರಲ್ಲಿ ಅಮೆರಿಕ ಪ್ರವಾಸದಲ್ಲಿದ್ದಾಗ ಅಲ್ಲಿನ ಪ್ರಥಮ ಮಹಿಳೆ ಅಧ್ಯಕ್ಷ ಜೋ ಬಿಡೆನ್ (Joe Biden) ಅವರ ಪತ್ನಿ ಜಿಲ್ ಬಿಡೆನ್ (Jill Biden) ಅವರಿಗೆ ದುಬಾರಿ ಉಡುಗೊರೆಯನ್ನು ನೀಡಿದ್ದರು. ಅದರಲ್ಲಿ 17.15 ಲಕ್ಷ ರೂ. ಮೌಲ್ಯದ  7.5-ಕ್ಯಾರೆಟ್ ವಜ್ರ ಸೇರಿದೆ. ಇದು ಇದು ಪ್ರಯೋಗಾಲಯದಲ್ಲಿ ತಯಾರಿಸಿದ ಹಸಿರು ವಜ್ರವಾಗಿದ್ದು, ಸೌರ ಮತ್ತು ಪವನ ಶಕ್ತಿಯಂತಹ ಸುಸ್ಥಿರ ಸಂಪನ್ಮೂಲಗಳನ್ನು ಬಳಸಿಕೊಂಡು ರಚಿಸಲಾಗಿದೆ. ಈ ವಜ್ರದ ಮತ್ತೊಂದು ವಿಶೇಷತೆ ಏನೆಂದರೆ ಇದು ಪರಿಸರ ಸ್ನೇಹಿಯಾಗಿದೆ.

ಈ ವಜ್ರವನ್ನು ಕಾರ್-ಎ-ಕಲಮ್ದಾನಿ ಎಂದು ಕರೆಯಲ್ಪಡುವ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಆ ಪೆಟ್ಟಿಗೆಯು ಕಾಶ್ಮೀರದ ಸುಂದರ ಕರಕುಶಲತೆಯನ್ನು ಒಳಗೊಂಡಿದೆ.

ಹಾಗೆಯೇ ಮೋದಿ ಜೋ ಬೈಡನ್‌ ಅವರಿಗೆ ಕೂಡ ವಿಶೇಷವಾದ ಉಡುಗೊರೆಯನ್ನು ನೀಡಿದ್ದರು. ಸುಂದರವಾದ ಕರಕುಶಲತೆಯನ್ನು ಒಳಗೊಂಡಿರುವ ಶ್ರೀಗಂಧದ ಪೆಟ್ಟಿಗೆಯನ್ನು ನೀಡಿದ್ದರು. ಇದನ್ನು ಜೈಪುರದ ಕುಶಲಕರ್ಮಿ ಒಬ್ಬರು ತಯಾರಿಸಿದ್ದರು. ಪೆಟ್ಟಿಗೆಯ ತಯಾರಿಕೆಯಲ್ಲಿ ಬಳಸುವ ಶ್ರೀಗಂಧವನ್ನು ಮೈಸೂರಿನಿಂದ ಪೂರೈಸಲಾಗಿತ್ತು.

ಮೋದಿ ಮಾತ್ರವಲ್ಲದೆ ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್ ಯೋಲ್ ಯೂನ್ 6 ರೂ. ಲಕ್ಷ ಬೆಲೆಬಾಳುವ ಫೋಟೋ ಆಲ್ಬಮ್, ಮಂಗೋಲಿಯಾದ ಪ್ರಧಾನ ಮಂತ್ರಿ 2.5 ಲಕ್ಷ ರೂ. ಬೆಲೆಯ ಮಂಗೋಲಿಯನ್‌ ಯೋಧರ ಪ್ರತಿಮೆ ಹಾಗೂ ಇಸ್ರೇಲ್‌, ಉಕ್ರೇನ್‌ ಅಧ್ಯಕ್ಷರು ಬೆಲೆ ಬಾಳುವ ಉಡುಗೊರೆಯನ್ನು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Narendra Modi: ಜಾಗತಿಕ ಸಮಸ್ಯೆಗಳಿಗೆ ಯುದ್ಧ ಭೂಮಿಯಿಂದ ಪರಿಹಾರ ದೊರೆಯದು; ನರೇಂದ್ರ ಮೋದಿ