ರಾಯ್‌ಪುರ: ಛತ್ತೀಸ್‌ಗಢದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವ ಪತ್ತೆಯಾದ ಪತ್ರಕರ್ತ ಮುಖೇಶ್ ಚಂದ್ರಕರ್ (Journalist Murder Case) ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಚಂದ್ರಕರ್‌ನನ್ನು ವಿಶೇಷ ತನಿಖಾ ತಂಡ (SIT) ಭಾನುವಾರ ರಾತ್ರಿ ಹೈದರಾಬಾದ್‌ನಲ್ಲಿ ಬಂಧಿಸಿದೆ. ಈತನೇ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಆತ ನಾಪತ್ತೆಯಾಗಿದ್ದ. (Chhattisgarh Horror)
ಆರೋಪಿ ಸುರೇಶ್ ಚಂದ್ರಕರ್ ಹೈದರಾಬಾದ್‌ನಲ್ಲಿರುವ ತನ್ನ ಚಾಲಕನ ಮನೆಯಲ್ಲಿ ಅಡಗಿಕೊಂಡಿದ್ದ. ಆತನನ್ನು ಪತ್ತೆಹಚ್ಚಲು ಪೊಲೀಸರು 200 ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸುಮಾರು 300 ಮೊಬೈಲ್ ಸಂಖ್ಯೆಗಳನ್ನು ಪರಿಶೀಲನೆ ಮಾಡಿದ್ದರು. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದಕ್ಕೂ ಮುನ್ನ ಸುರೇಶ್ ಚಂದ್ರಕರ್‌ಗೆ ಸಂಬಂಧಿಸಿದ ನಾಲ್ಕು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ಆತನ ಮಾಲೀಕತ್ವದ ಅಕ್ರಮವಾಗಿ ನಿರ್ಮಿಸಲಾದ ಯಾರ್ಡ್ ಅನ್ನು ನೆಲಸಮಗೊಳಿಸಲಾಯಿತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಸುರೇಶ್ ಚಂದ್ರಕರ್ ಪತ್ನಿಯನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯೇನು?
ಛತ್ತೀಸ್‌ಗಢದ ಬಿಜಾಪುರದಲ್ಲಿ ರಸ್ತೆ ಕಾಮಗಾರಿಯ ಕುರಿತ ವರದಿ ಮಾಡಿದ್ದ ಕಾರಣಕ್ಕಾಗಿ 28ರ ಹರೆಯದ ಮುಕೇಶ್ ಚಂದ್ರಾಕರ್ ಎಂಬ ಪತ್ರಕರ್ತ ಹತ್ಯೆಯಾಗಿದ್ದಾರೆ. ಜನವರಿ 1ರಿಂದ ಕಾಣೆಯಾಗಿದ್ದ ಚಂದ್ರಾಕರ್ ಅವರ ಶವವು ಜನವರಿ 3ರಂದು ಗುತ್ತಿಗೆದಾರರೊಬ್ಬರ ಸೈಟ್‌ನಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿತ್ತು.
ಮುಖೇಶ್ ಗುತ್ತಿಗೆದಾರ ಸುರೇಶ್ ಚಂದ್ರಕಾರ್ ಎಂಬಾತನ ಅಕ್ರಮಗಳ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದ್ದ ಮುಕೇಶ್, ಬಸ್ತಾರ್‌ನಲ್ಲಿನ 120 ಕೋಟಿ ರೂ ಮೊತ್ತದ ರಸ್ತೆ ನಿರ್ಮಾಣ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಬಯಲಿಗೆಳೆದಿದ್ದರು.
ಜನವರಿ 1 ರಂದು ಮನೆಯಿಂದ ನಾಪತ್ತೆಯಾಗಿದ್ದ ಮುಕೇಶ್ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಮುಕೇಶ್ ಅವರ ಅಣ್ಣ ಯುಕೇಶ್ ಚಂದ್ರಕರ್ ಅವರು ಪೊಲೀಸರಿಗೆ ಕಾಣೆ ದೂರು ಸಲ್ಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಅವರ ಮೊಬೈಲ್ ಲೊಕೇಶನ್ ಗುರುತಿಸಿದ್ದರು. ನಂತರ ಮುಖೇಶ್ ಶವ ಸಿಕ್ಕಿತ್ತು. ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳ ಬೇಟೆಗಿಳಿದ ಪೊಲೀಸರು ಹೈದರಾಬಾದ್‌ನಲ್ಲಿ ಸುರೇಶ್ ಚಂದ್ರಕಾರ್‌ನನ್ನು ಹಾಗೂ ದಿಲ್ಲಿಯಲ್ಲಿ ರಿತೇಶ್‌ನನ್ನು ಬಂಧಿಸಿದ್ದಾರೆ. ಶವವನ್ನು ಎಸೆಯಲು ಸಹಾಯ ಮಾಡಿದ ಕಾರ್ಮಿಕನೊಬ್ಬನನ್ನು ಕೂಡ ಬಂಧಿಸಲಾಗಿದೆ. ಗುತ್ತಿಗೆದಾರನ ವಲಯದಲ್ಲಿನ ಹಲವಾರು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ : Viral Video: ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್ʼ ಮಾಡಿದ ಪ್ರಯಾಣಿಕರು; ವೈರಲ್ ಆಯ್ತುಈ ವಿಡಿಯೊ