ನವದೆಹಲಿ: ದೇಶದಲ್ಲಿ 5ಜಿ ಅಂತರ್ಜಾಲ ನೆಟ್’ವರ್ಕ್ ಅನ್ನು ಬಳಸುವ ವಿರುದ್ದ ಬಾಲಿವುಟ್ ನಟಿ ಜೂಹಿ ಚಾವ್ಲಾ ದೆಹಲಿ ನ್ಯಾಯಾಲಯಲ್ಲಿ ದಾವೆ ಹೂಡಿದ್ದಾರೆ.
ಜನಸಾಮಾನ್ಯರು, ಪ್ರಾಣಿಗಳು ಮುಂತಾದವುಗಳ ಮೇಲೆ 5ಜಿ ತರಂಗಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಗಂಭೀರ ವಾಗಿ ಪರಿಗಣಿಸಿರುವ ನಟಿ ಜೂಹಿ ಅವರು ಸೋಮವಾರ ದೆಹಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ನಟಿ ಹೂಡಿರುವ ದಾವೆಯ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾ.ಸಿ.ಹರಿಶಂಕರ್ ಅವರು, ವಿಚಾರಣೆಯನ್ನು ಇನ್ನೊಂದು ಪೀಠಕ್ಕೆ ವರ್ಗಾ ಯಿಸಿದ್ದು, ಜೂನ್ 2 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ನಟಿ ಹೂಡಿರುವ ದಾವೆಯಂತೆ, ದೇಶದಲ್ಲಿ ಟೆಲಿಕಾಂ ಸಂಸ್ಥೆಗಳು 5ಜಿ ಯನ್ನು ಜಾರಿಗೆ ತರುವಲ್ಲಿ ಸಫಲರಾದರೆ, ಭೂಮಿಯಲ್ಲಿ ಯಾವುದೇ ಮಾನವ, ಪ್ರಾಣಿ-ಪಕ್ಷಿ, ಜಲಚರಗಳು ಹಾಗೂ ಸಣ್ಣಪುಟ್ಟ ಕ್ರಿಮಿಕೀಟಗಳು ಕೂಡ ತಮ್ಮ ಅಸ್ತಿತ್ವವನ್ನು ವರ್ಷದ 365 ದಿನ ಕೂಡ ಉಸಿರಾಡಲು, ಬದುಕಲು ಹೆಣಗಲಿವೆ. ೫ಜಿ ಎನ್ನುವುದು ಸದ್ಯದ ತರಂಗಗಳಿಂದ ಹತ್ತು ಪಟ್ಟು ಹೆಚ್ಚು ನೆಟ್‌ವರ್ಕ್ ಸೌಲಭ್ಯ ನೀಡುತ್ತದೆ. ಆದರೆ, ಅಷ್ಟೇ ವೇಗವಾಗಿ ಭೂಮಿ ಮೇಲಿನ ಜೀವಜಂತುಗಳ ಅಸ್ತಿತ್ವಕ್ಕೆ ಅಪಾಯ ತಂದೊಡ್ಡಲಿದೆ.
ನಟಿ ಜೂಹಿ ಪರ ನ್ಯಾಯಾಲಯದಲ್ಲಿ ವಕೀಲ ದೀಪಕ್ ಖೋಸ್ಲಾ ಅವರು ದಾವೆಯ ಅರ್ಜಿ ಸಲ್ಲಿಸಿದರು.