ಮುಂಬೈ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಅವರ ಬಹುನಿರೀಕ್ಷಿತ ಚಿತ್ರ ಎಮರ್ಜೆನ್ಸಿ (Emergency) ಜನವರಿ 17ರಂದು ಬಿಡುಗಡೆಯಾಗಲಿದೆ. 1975ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ (PM Indira Gandhi) ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ಐತಿಹಾಸಿಕ ಸನ್ನಿವೇಶದ ಚಿತ್ರಣ ಹೊಂದಿರುವ ಸಿನಿಮಾ ಇದಾಗಿದ್ದು, ಕಂಗನಾ ಇಂದಿರಾ ಗಾಂಧಿಯಾಗಿ ನಟಿಸಿದ್ದಾರೆ. ಇದೀಗ ಕಂಗನಾ ತಮ್ಮ ಚಿತ್ರವನ್ನು ವೀಕ್ಷಿಸಲು ಪ್ರಿಯಾಂಕಾ ಗಾಂಧಿಯವರನ್ನು (Priyanka Gandhi) ಆಹ್ವಾನಿಸಿದ್ದಾರೆ.
ಸಂಸತ್ತಿನಲ್ಲಿ ಪ್ರಿಯಾಂಕಾ ಅವರನ್ನು ಭೇಟಿಯಾದ ಕಂಗನಾ, ಎಮರ್ಜೆನ್ಸಿ ಚಿತ್ರವನ್ನು ವೀಕ್ಷಿಸಲು ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಕಂಗನಾ ನಾನು ಪ್ರಿಯಾಂಕಾ ಗಾಂಧಿಯನ್ನು ಸಂಸತ್ತಿನಲ್ಲಿ ಭೇಟಿಯಾಗಿದ್ದೆ. ಮತ್ತು ನಾನು ಅವಳಿಗೆ ಮೊದಲು ಹೇಳಿದ್ದು, ‘ನೀವು ಎಮರ್ಜೆನ್ಸಿ ಚಿತ್ರ ನೋಡಬೇಕು ಎಂದು ಹೇಳಿದ್ದೇನೆ . ಅವರು ತುಂಬಾ ವಿನಮೃತೆಯಿಂದ ಹೌದು ಇರಬಹುದು ಎಂದು ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ. ನಿಜವಾಗಲೂ ಅವರು ಚಿತ್ರ ವೀಕ್ಷಿಸುತ್ತಾರೆಯೇ ಎಂದು ನೋಡೋಣ ಎಂದು ಮಂಡಿ ಸಂಸದೆ ಹೇಳಿದರು.
#WATCH | Mumbai: On her film Emergency, actress Kangana Ranaut says "There was a lot of struggle. You must have seen no one could ever make a film on Mrs Gandhi (Indira Gandhi)…There was a film 'Kissa Kursi Ka', Director of that film had to commit suicide and such a situation… pic.twitter.com/G1R8XKXDM3
— ANI (@ANI) January 7, 2025
ಇಂದಿರಾ ಗಾಂಧಿ ಅವರ ಬಗ್ಗೆ ಮಾತನಾಡಿದ ಕಂಗನಾ ಈ ಸಿನಿಮಾ ಮಾಡುವಾಗ ನಾನು ಸಾಕಷ್ಟು ಸಂಶೋಧನೆ ನಡೆಸಿದ್ದೇನೆ. ಇಂದಿರಾ ಗಾಂಧಿಯವರ ವಯಕ್ತಿಕ ಜೀವನ, ಅವರ ಮದುವೆ , ಪತಿ ಹಾಗೂ ಅವರ ಸುತ್ತಮುತ್ತಲಿನ ಬಗ್ಗೆ ತಿಳಿದು ಕೊಂಡಿದ್ದೇನೆ. ಒಬ್ಬ ಮಹಿಳೆಯ ಬಗ್ಗೆ ನಾವು ಚಿತ್ರದಲ್ಲಿ ತೋರಿಸುವಾಗ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು. ನಾನು ಇಂದಿರಾ ಗಾಂಧಿಯವರನ್ನು ಎಷ್ಟು ಪ್ರೀತಿಸುತ್ತೇನೆಯೇ ಅಷ್ಟೇ ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಎಮರ್ಜೆನ್ಸಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿದೆ.
ಈ ಸುದ್ದಿಯನ್ನೂ ಓದಿ : Kangana Ranaut: ಕೃಷಿ ಕಾಯ್ದೆ ಕುರಿತಾದ ಹೇಳಿಕೆ ಹಿಂಪಡೆದ ಕಂಗನಾ