Sunday, 12th January 2025

Kannauj roof Collapse: ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣ ಹಂತದ ಛಾವಣಿ ಕುಸಿತ; 28 ಮಂದಿಯ ರಕ್ಷಣೆ; ಮುಂದುವರಿದ ಕಾರ್ಯಾಚರಣೆ

Kannauj Horror

ಲಖನೌ: ಉತ್ತರ ಪ್ರದೇಶದ (Uttar Pradesh) ಕನ್ನೌಜ್‌ನ (Kannauj Horror) ರೈಲು ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ನಿರ್ಮಾಣ ಹಂತದ ಛಾವಣಿ ಕುಸಿದಿದ್ದು(Kannauj roof Collapse),ಸುಮಾರು 40 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದ್ದು, ತಡರಾತ್ರಿಯ ವೇಳೆಗೆ 28 ​​ಕಾರ್ಮಿಕರನ್ನು ರಕ್ಷಿಸಲಾಗಿದೆ. ಅಸ್ವಸ್ತ್ರರನ್ನು ಕನೌಜ್, ಕಾನ್ಪುರ ಮತ್ತು ಲಖನೌ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಬಗ್ಗೆ ಕಾನ್ಪುರ ವಿಭಾಗದ ಆಯುಕ್ತ ಕೆ ವಿಜಯೇಂದ್ರ ಪಾಂಡಿಯನ್ ಮಾತನಾಡಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಸಿಲುಕಿರುವವರನ್ನು ಪತ್ತೆಹಚ್ಚಲು ನಾವು ಡ್ರೋನ್‌ಗಳು, ಸ್ನಿಫರ್ ಡಾಗ್‌ಗಳು ಮತ್ತು ಇತರ ಉಪಕರಣಗಳನ್ನು ಬಳಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅವಶೇಷಗಳನ್ನು ತೆರವುಗೊಳಿಸುವುದನ್ನು ಮುಂದುವರೆಸಿದೆ.

ಈಶಾನ್ಯ ರೈಲ್ವೆ ವಕ್ತಾರ ಪಂಕಜ್ ಕುಮಾರ್ ಸಿಂಗ್ ಮಾತನಾಡಿ, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು  ಗಂಭೀರವಾಗಿ ಗಾಯಗೊಂಡವರಿಗೆ ತಲಾ  2.5 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ  50,000 ರೂ. ಆರ್ಥಿಕ ನೆರವು ನೀಡಲಾಗುವುದು ಘೋಷಿಸಿದ್ದಾರೆ. ಈ ಕಾಮಗಾರಿಯು ಅಮೃತ್ ಭಾರತ್ ಯೋಜನೆಯ ಭಾಗವಾಗಿದ್ದು, ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡುವ ಉದ್ದೇಶದಿಂದ ಕೆಲಸ ನಡೆಯುತ್ತಿತ್ತು. ಪಿಲ್ಲರ್‌ಗಳು ಪೂರ್ಣಗೊಂಡಿವೆ ಮತ್ತು ಕಾರ್ಮಿಕರು ಕಾಂಕ್ರೀಟ್ ಚಪ್ಪಡಿ ಹಾಕುವ ಪ್ರಕ್ರಿಯೆಯಲ್ಲಿದ್ದರು.

ಘಟನೆಯಲ್ಲಿ ಪಾರಾದ ವ್ಯಕ್ತಿಯೊಬ್ಬರು ಮಾತನಾಡಿದ್ದು, ಳದಲ್ಲಿ ಸುಮಾರು 40 ಕಾರ್ಮಿಕರು ಇದ್ದರು. ಊಟದ ವಿರಾಮದ ನಂತರ ಕಾಮಗಾರಿ ಪುನರಾರಂಭಗೊಂಡಿದ್ದು, ಈಗಾಗಲೇ ಅರ್ಧದಷ್ಟು ಸ್ಲ್ಯಾಬ್ ಹಾಕಲಾಗಿತ್ತು. ನಾಲ್ಕೈದು ಕಾರ್ಮಿಕರು ನಿಲ್ದಾಣದ ಪ್ರವೇಶ ದ್ವಾರದ ಬಳಿ ಕಬ್ಬಿಣ ಮತ್ತು ಬಿದಿರು ಅಟ್ಟಣಿಗೆ ನಿರ್ವಹಣೆ ಮಾಡುತ್ತಿದ್ದರು.

“ಇದ್ದಕ್ಕಿದ್ದಂತೆ, ಈ ತುದಿ ಕುಸಿಯಲು ಪ್ರಾರಂಭಿಸಿತು. ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಸ್ಲ್ಯಾಬ್ ಕೆಳಕ್ಕೆ ಬಿತ್ತು. ನಾನು ಮೂಲೆಯಲ್ಲಿದ್ದೆ ಮತ್ತು ಸುತ್ತಲೂ ಕಿರುಚುತ್ತಿದ್ದರಿಂದ ಓಡಿಹೋದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Assam Mine Accident: ಅಸ್ಸಾಂ ಗಣಿ ದುರಂತ- 4 ಕಾರ್ಮಿಕರ ಶವ ಪತ್ತೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ!

Leave a Reply

Your email address will not be published. Required fields are marked *