Thursday, 21st November 2024

ಕೇದಾರನಾಥ, ಯಮುನೋತ್ರಿ ದೇವಾಲಯ ಬಂದ್

ಡೆಹ್ರಾಡೂನ್: ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ಹಿಮಾಲಯದ ತಪ್ಪಲಿ ನಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳಗಳಾದ ಕೇದಾರ ನಾಥ ಮತ್ತು ಯಮುನೋತ್ರಿ ದೇವಾಲಯಗಳನ್ನು ಶನಿವಾರ ಮುಚ್ಚಲಾಯಿತು.

ವೇದ ಮಂತ್ರ ಘೋಷಗಳೊಂದಿಗೆ ಕೇದಾರನಾಥ ದೇವಾಲಯದ ಪ್ರವೇಶ ದ್ವಾರ ಗಳನ್ನು ಬೆಳಿಗ್ಗೆ ಮತ್ತು ಯಮುನೋತ್ರಿ ದೇಗುಲದ ಪ್ರವೇಶ ದ್ವಾರಗಳನ್ನು ಮಧ್ಯಾಹ್ನ ಮುಚ್ಚಲಾಯಿತು ಎಂದು ದೇವಸ್ಥಾನ ಮಂಡಳಿಯ ಮಾಧ್ಯಮ ವಿಭಾಗ ತಿಳಿಸಿದೆ.

ದೇವಾಲಯಗಳ ದ್ವಾರಗಳನ್ನು ಮುಚ್ಚಿದ ನಂತರ, ಬಾಬಾ ಕೇದಾರನಾಥ (ಶಿವ) ಮತ್ತು ಯಮುನಾ ದೇವತೆಯ ವಿಗ್ರಹಗಳನ್ನು ಪುಷ್ಪಾಲಂಕೃತ ಪಲ್ಲಕ್ಕಿಗಳಲ್ಲಿ ಉತ್ಸವದ ಮೂಲಕ ಕ್ರಮವಾಗಿ ಉಖಿಮಠ ಮತ್ತು ಖರ್‌ಸಾಲಿ ಸ್ಥಳಗಳಿಗೆ ಕರೆದೊಯ್ಯಲಾಯಿತು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ತೀರ್ಥಯಾತ್ರೆ ಆರಂಭವಾದಾಗಿನಿಂದ 4.50 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ‘ಚಾರ್‌ ಧಾಮ್’ಗೆ ಭೇಟಿ ನೀಡಿದ್ದಾರೆ. ಬದರಿನಾಥ ದೇವಾಲಯದ ದ್ವಾರವನ್ನು ಇದೇ ತಿಂಗಳ 20ರಂದು ಮುಚ್ಚಲಾಗುವುದು.