ಯುವತಿ ತನ್ನ ಮಂಡಯೂರಿ ಪ್ರಿಯಕರನಿಗೆ ಉಂಗುರ ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದಾಳೆ. ಆ ನಂತರ ಇಬ್ಬರೂ ತಬ್ಬಿಕೊಳ್ಳುತ್ತಿರುವುದು ಕಂಡುಬರುತ್ತದೆ.
ಈ ವಿಡಿಯೋಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಪ್ರೀತಿಯ ಅಭಿವ್ಯಕ್ತಿ ಯನ್ನು ಬಹಳ ಸುಂದರ ಎಂದು ಬಣ್ಣಿಸು ತ್ತಿದ್ದರೆ, ಇನ್ನು ಕೆಲವರು ಧಾರ್ಮಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳನ್ನು ಖಂಡಿಸು ತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್, ಧಾರ್ಮಿಕ ಕ್ಷೇತ್ರಕ್ಕೆ ಘನತೆ, ನಂಬಿಕೆ, ಸಂಪ್ರದಾಯಗಳಿದ್ದು, ಅದರಂತೆ ಭಕ್ತರು ನಡೆದುಕೊಳ್ಳಬೇಕು. ಸಮಿತಿಯ ಕೆಲಸ ಕೇವಲ ದೇವಸ್ಥಾನದ ನಿರ್ವಹಣೆಗೆ ಸೀಮಿತವಾಗಿದೆ ಎಂದು ಹೇಳಿದರು.