Thursday, 12th December 2024

ದೇಗುಲದ ಆವರಣದಲ್ಲಿ ಪ್ರಿಯಕರನಿಗೆ ಯುವತಿಯ ಪ್ರಪೋಸ್‌…!

ಡೆಹ್ರಾಡೂನ್: ಕೇದಾರನಾಥ ದೇಗುಲದ ಆವರಣದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಪ್ರಪೋಸ್‌ ಮಾಡಿದ್ದು, ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋ ಸುಮಾರು ಎರಡು ದಿನಗಳ ಹಳೆಯದಾಗಿದೆ ಎಂದು ಹೇಳಲಾಗಿದ್ದು, ಇದರಲ್ಲಿ ಯುವತಿ ಮತ್ತು ಆಕೆಯ ಗೆಳೆಯ ಇಬ್ಬರೂ ಹಳದಿ ಬಟ್ಟೆಯನ್ನು ಧರಿಸಿರುವು ದನ್ನು ಕಾಣಬಹುದು.

ಯುವತಿ ತನ್ನ ಮಂಡಯೂರಿ ಪ್ರಿಯಕರನಿಗೆ ಉಂಗುರ ತೊಡಿಸುವ ಮೂಲಕ ಪ್ರಪೋಸ್‌ ಮಾಡಿದ್ದಾಳೆ. ಆ ನಂತರ ಇಬ್ಬರೂ ತಬ್ಬಿಕೊಳ್ಳುತ್ತಿರುವುದು ಕಂಡುಬರುತ್ತದೆ.‌

ಈ ಕುರಿತು ಪ್ರತಿಕ್ರಿಯಿಸಿದ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್, ಧಾರ್ಮಿಕ ಕ್ಷೇತ್ರಕ್ಕೆ ಘನತೆ, ನಂಬಿಕೆ, ಸಂಪ್ರದಾಯಗಳಿದ್ದು, ಅದರಂತೆ ಭಕ್ತರು ನಡೆದುಕೊಳ್ಳಬೇಕು. ಸಮಿತಿಯ ಕೆಲಸ ಕೇವಲ ದೇವಸ್ಥಾನದ ನಿರ್ವಹಣೆಗೆ ಸೀಮಿತವಾಗಿದೆ ಎಂದು ಹೇಳಿದರು.