Sunday, 15th December 2024

ಕೇದಾರನಾಥ ಯಾತ್ರೆಯ ನೋಂದಣಿ ಸ್ಥಗಿತ

ಡೆಹ್ರಾಡೂನ್: ಕೇದಾರನಾಥ ಯಾತ್ರೆ ಕೈಗೊಂಡಿರುವ ಭಕ್ತರಿಗೆ ಕ್ಷಣಕ್ಷಣಕ್ಕೂ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಅಧಿಕ ಜನಸಂದಣಿಯ ನಡುವೆ ಮಳೆ, ಭಾರಿ ಹಿಮಪಾತ ಸಂಭವಿಸುತ್ತಲೇ ಇದೆ. ಹೀಗಾಗಿ ಪವಿತ್ರ ಯಾತ್ರೆಗೆ ಅಡ್ಡಿಯಾಗುತ್ತಿದ್ದು, ಇದೀಗ ಮತ್ತೆ ಜೂ.10 ರವರೆಗೆ ಆಫ್‌ಲೈನ್ ಮತ್ತು ಆನ್‌ಲೈನ್ ನೋಂದಣಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಆದರೆ, ಈಗಾಗಲೇ ನೋಂದಣಿ ಮಾಡಿಸಿಕೊಂಡವರು ಕೇದಾರ ನಾಥ ಯಾತ್ರೆ ಕೈಗೊಳ್ಳಬಹುದು ಎಂದು ಸರ್ಕಾರ ಸೂಚನೆ ನೀಡಿದೆ.

ಸರ್ಕಾರದ ಅಂಕಿಅಂಶಗಳನ್ನು ನೋಡಿದರೆ, ಇಲ್ಲಿಯವರೆಗೆ 7 ಲಕ್ಷದ 13 ಸಾವಿರ ಭಕ್ತರು ದೇವರ ದರ್ಶನ ಪಡೆದಿದ್ದಾರೆ.

ಕೇದಾರನಾಥ ಧಾಮಕ್ಕೆ ಯಾತ್ರೆ ಕೈಗೊಂಡು ದೇವರ ದರ್ಶನ ಪಡೆಯಲು ಬಂದಿದ್ದ ಉತ್ತರ ಪ್ರದೇಶದ ಭಕ್ತ ರೊಬ್ಬರು ಸುಮೇರು ಪರ್ವತದ ಹಿಮದಲ್ಲಿ ಮೇ 26 ರಂದು (ಶುಕ್ರವಾರ) ಸಿಲುಕಿ ಸಂಕಷ್ಟದಲ್ಲಿದ್ದರು. ತಕ್ಷಣವೇ ಎಸ್​ಡಿಆರ್​ಎಫ್​ ಮತ್ತು ಎನ್​ಡಿಆರ್‌ಎಫ್​ ತಂಡಗಳು ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಪ್ರಾಣ ಕಾಪಾಡಿದ್ದರು.