ನವದೆಹಲಿ: ಇತ್ತೀಚೆಗಷ್ಟೇ ಹಸೆಮಣೆ ಏರಿರುವ ನಟಿ ಕೀರ್ತಿ ಸುರೇಶ್ ಇದೀಗ ತಮ್ಮ ಮದುವೆಯ ಕೆಲವೊಂದು ಇಂಟ್ರೆಸ್ಟಿಂಗ್ ಪಿಕ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ದೀರ್ಘಕಾಲದ ಗೆಳೆಯ ಆಂಟೋನಿ ಜೊತೆ ವೈವಾಹಿಕ ಬಂಧನಕ್ಕೊಳಗಾಗಿದ್ದರು. ಇನ್ನು ಕೀರ್ತಿ ಸುರೇಶ್ ಹಾಗೂ ಆಂಟೋನಿ ವಿವಾಹಕ್ಕೆ ದಳಪತಿ ವಿಜಯ್ ಕೂಡ ಆಗಮಿಸಿದ್ದರು. ವಿವಾಹಕ್ಕೆ ಬಂದ ಅವರು ನವ ದಂಪತಿಗೆ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮದುವೆಗೆ ಬಂದು ಶುಭ ಹಾರೈಸಿದ ದಳಪತಿ ವಿಜಯ್!
ಕೀರ್ತಿ ಸುರೇಶ್ & ಆಂಟೋನಿ ತಟ್ಟಿಲ್ ಅವರು 15 ವರ್ಷಗಳಿಂದ ಪ್ರೀತಿಯಲ್ಲಿದ್ದರೂ ಕೂಡ ಎಲ್ಲಿಯೂ ತಮ್ಮ ಲವ್ ಸ್ಟೋರಿ ರಿವಿಲ್ ಆಗದಂತೆ ಸಿಕ್ರೆಟ್ ಮೈಂಟೆನ್ ಮಾಡಿದ್ರು. ಇದೀಗ ಇವರಿಬ್ಬರ ಪ್ರೀತಿಗೆ ಮದುವೆ ಮುದ್ರೆ ಬಿದ್ದಿದ್ದು ಕುಟುಂಬದ ಹಿರಿಯರ ಜೊತೆ ಸೇರಿ ಮದುವೆಯಾಗಿದ್ದಾರೆ. ಡಿಸೆಂಬರ್ 12 ರಂದು ಗೋವಾದಲ್ಲಿ ನಟಿ ಮದುವೆಯಾಗಿದ್ರು. ಈ ಮದುವೆ ಸಂಭ್ರಮಕ್ಕೆ ಸಿನಿಮಾ ಇಂಡಸ್ಟ್ರಿಯ ಅನೇಕ ನಟ ನಟಿಯರು ಕೂಡ ಭಾಗಿಯಾಗಿದ್ರು. ನಟ ವಿಜಯ್, ನಟಿ ತ್ರಿಶಾ ಹಾಗೂ ನಿರ್ದೇಶಕ ಅಟ್ಲಿ ಕೂಡ ಕೀರ್ತಿ ಸುರೇಶ್ ಮದುವೆಗೆ ಆಗಮಿಸಿದ್ರು.
ದಳಪತಿಯೊಂದಿಗೆ ಪೋಟೋಹಂಚಿಕೊಂಡ ನಟಿ!
ಇದೀಗ ನಟಿ ಕೀರ್ತಿ ಸುರೇಶ್ ಮದುವೆಯ ಸಂಭ್ರಮದಿಂದ ಇನ್ನೂ ಆಚೆ ಬಂದಿಲ್ಲ. ಕೀರ್ತಿ ಸುರೇಶ್ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ತನ್ನ ಕನಸಿನ ಮದುವೆಯ ಮೆಮೊರೆಬಲ್ ಪೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಮದುವೆ ಸಮಾರಂಭಕ್ಕೆ ಬಂದ ವಿಶೇಷ ಅತಿಥಿಗಳಲ್ಲಿ ಸಹ ನಟ, ದಳಪತಿ ವಿಜಯ್ ಕೂಡ ಒಬ್ಬರು. ಈ ಫೋಟೋವನ್ನುಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೊದಲ್ಲಿ ಕೀರ್ತಿ ಮತ್ತು ಆಂಟೋನಿ ಜತೆ ವಿಜಯ್ ಇದ್ದಾರೆ. ಪೋಟೋದಲ್ಲಿ ಕೀರ್ತಿ ಮತ್ತು ಆಂಟೋನಿ ವಿಜಯ್‌ಗೆ ಹ್ಯಾಂಡ್ ಶೇಕ್ ಮಾಡಿ ಶುಭಾಶಯ ಕೋರುತ್ತಿರುವುದನ್ನು ಕಾಣಬಹುದಾಗಿದೆ. ಇನ್ನೊಂದು ಪೋಟೋದಲ್ಲಿ ದಂಪತಿ ನಡುವೆ ನಿಂತು ವಿಜಯ್ ಪೋಸ್ ಕೊಟ್ಟಿದ್ದಾರೆ.
ಈ ರೀತಿ ಬರೆದುಕೊಂಡಿದ್ದಾರೆ!
ನಮ್ಮ ಕನಸಿನ ಮದುವೆಗೆ ನನ್ನ ಕನಸಿನ ಐಕಾನ್ ಸ್ಟಾರ್ ಬಂದು ಶುಭಕೋರಿದ್ರು. ಇದು ಹೆಚ್ಚು ಖುಷಿ ನೀಡಿದೆ ಎಂದು ಕೀರ್ತಿ ಸುರೇಶ್ ಬರೆದುಕೊಂಡಿದ್ದಾರೆ. ಪೋಟೋ ಹಂಚಿಕೊಂಡು ಕೀರ್ತಿ “ನಮ್ಮ ಕನಸಿನ ಐಕಾನ್ ನಮ್ಮ ಕನಸಿನ ಮದುವೆಯಲ್ಲಿ ನಮ್ಮನ್ನು ಆಶೀರ್ವದಿಸಿದಾಗ! ಎಂದು ಟ್ಯಾಗ್ ಲೈನ್ ನೀಡಿದ್ದಾರೆ. ಇದಕ್ಕೆ ಇವರ ಅಭಿಮಾನಿಗಳು ನಾನಾ ಬಗೆಯ ಕಾಮೆಂಟ್ ಹಾಕಿದ್ದಾರೆ.
ನಟ ವಿಜಯ್ ಅವರ ಟಿವಿಕೆ ಪಕ್ಷದ ಸೋಶಿಯಲ್ ಮೀಡಿಯಾ ಪೇಜ್ನಲ್ಲೂ ಈ ಫೋಟೋಗಳನ್ನು ಶೇರ್ ಮಾಡಲಾಗಿದ್ದು ದಳಪತಿ ಇನ್ ಕೀರ್ತಿ ಸುರೇಶ್ ವೆಡ್ಡಿಂಗ್ ಎಂದು ಟೈಟಲ್ ಕೊಟ್ಟು ಫೋಟೋಗಳನ್ನು ಹಂಚಿ ಕೊಂಡಿದ್ದಾರೆ. ಇದಕ್ಕೂ ಅಭಿಮಾನಿಗಳು ನಾನಾ ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇನ್ನು ನಟಿ ಕೀರ್ತಿಗೆ ರಾಶಿ ಖನ್ನಾ, ಅನುಪಮಾ ಪರಮೇಶ್ವರನ್, ವರುಣ್ ಧವನ್, ಪ್ರಿಯಾಂಕಾ ಮೋಹನ್, ಹನ್ಸಿಕಾ, ಖುಷ್ಬೂ ಸುಂದರ್, ರಾಧಿಕಾ ಶರತ್ ಕುಮಾರ್, ಶ್ರದ್ಧಾ ಶ್ರೀನಾಥ್, ಸೋನು ಗೌಡ ಸೇರಿದಂತೆ ಇನ್ನೂ ಅನೇಕರು ಇವರು ವಿಶ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Keerthy Suresh: ಹಸೆಮಣೆಗೇರಲು ಕೀರ್ತಿ ಸುರೇಶ್ ಸಜ್ಜು; ವರನ್ಯಾರು? ಮದುವೆ ಯಾವಾಗ?