Saturday, 23rd November 2024

ಕೆಜಿಎಫ್ 2 ಪ್ರಭಾವ: ಒಂದು ಪ್ಯಾಕ್ ಸಿಗರೇಟ್ ಸೇದಿ ಬಾಲಕ ಅಸ್ವಸ್ಥ

ಹೈದರಾಬಾದ್: ಕೆಜಿಎಫ್ ಚಾಪ್ಟರ್ 2 ಅನ್ನು ಎರಡು ದಿನಗಳಲ್ಲಿ ಮೂರು ಬಾರಿ ನೋಡಿದ ನಂತರ, ಹೈದರಾಬಾದಿನ ಬಾಲಕನೊಬ್ಬ ರಾಕಿ ಭಾಯ್ನಿಂದ ಪ್ರೇರಿತನಾಗಿ ಸಂಪೂರ್ಣ ಪ್ಯಾಕ್ ಸಿಗರೇಟು ಸೇದಿದ್ದು, ತೀವ್ರವಾದ ಗಂಟಲು ನೋವು ಮತ್ತು ಕೆಮ್ಮು ಕಾಣಿಸಿಕೊಂಡಿತು ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ದೊಯ್ಯಲಾಯಿತು.

ಹೈದರಾಬಾದ್ನ ಸೆಂಚುರಿ ಆಸ್ಪತ್ರೆಯ ವೈದ್ಯರು ಶನಿವಾರ ಹದಿಹರೆಯದವನಿಗೆ ಕೌನ್ಸೆಲಿಂಗ್ ನೀಡುವುದರ ಜೊತೆಗೆ ಯಶಸ್ವಿ ಯಾಗಿ ಚಿಕಿತ್ಸೆ ನೀಡಿರುವುದಾಗಿ ಘೋಷಿಸಿದರು.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ವಾಸಕೋಶ ಶಾಸ್ತ್ರಜ್ಞ ಡಾ.ರೋಹಿತ್ ರೆಡ್ಡಿ ಪಥೂರಿ, ‘ಹದಿಹರೆಯದವರು ‘ರಾಕಿ ಭಾಯ್’ ನಂತಹ ಪಾತ್ರಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಈ ಸಂದರ್ಭದಲ್ಲಿ, ಈ ಚಿಕ್ಕ ಹುಡುಗ ಸಿಗರೇಟು ಸೇದಲು ಪ್ರಾರಂಭಿ ಸಿದನು ಮತ್ತು ಸಿಗರೇಟುಗಳಿಂದ ತುಂಬಿದ ಪ್ಯಾಕೆಟ್ ಅನ್ನು ಸೇವಿಸಿದ ನಂತರ ತೀವ್ರವಾಗಿ ಅಸ್ವಸ್ಥನಾದನು.

ಸಿಗರೇಟು ಸೇದುವುದು, ತಂಬಾಕು ಜಗಿಯುವುದು ಅಥವಾ ಮದ್ಯಪಾನದಂತಹ ಕೃತ್ಯಗಳನ್ನು ವೈಭವೀಕರಿಸದಿರುವ ನೈತಿಕ ಜವಾಬ್ದಾರಿಯನ್ನು ಚಲನಚಿತ್ರ ತಯಾರಕರು ಮತ್ತು ನಟರು ಹೊಂದಿರುತ್ತಾರೆ.

‘ಹದಿಹರೆಯದವರ ಪೋಷಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಮತ್ತು ತಮ್ಮ ಮಗುವಿನ ಕೃತ್ಯಗಳ ಮೇಲೆ ಯಾವ ಅಂಶ ಗಳು ಪ್ರಭಾವ ಬೀರುತ್ತಿವೆ ಎಂಬುದರ ಮೇಲೆ ನಿಗಾ ಇಡಬೇಕು. ತಂಬಾಕು ಸೇದುವುದು ಮತ್ತು ಮದ್ಯಪಾನದಂತಹ ಕೃತ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಹೇಳಿದರು.