ಬೆಂಗಳೂರು: ಸಮಂತಾ ರುತ್ ಪ್ರಭು (Khushbu Sundar) ಮತ್ತು ನಾಗಚೈತನ್ಯ ಅವರ ವಿಚ್ಛೇದನದ ಕುರಿತು ತೆಲಂಗಾಣದ ಸಚಿವೆ ಕೊಂಡಾ ಸುರೇಖಾ (Konda Surekha) ಅವರ ಹೇಳಿಕೆಯನ್ನು ನಟಿ-ರಾಜಕಾರಣಿ ಖುಷ್ಬೂ ಸುಂದರ್ ಖಂಡಿಸಿದ್ದಾರೆ. ಸಮಂತಾ ಮತ್ತು ಚೈತನ್ಯ (Naga Chaitanya) ಅವರ ವೈಯಕ್ತಿಕ ಜೀವನವನ್ನು ಎಳೆದು ತಂದಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಮಂತಾ ಅವರ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ಚಲನಚಿತ್ರೋದ್ಯಮದ ಮಂದಿಯನ್ನು ರಾಜಕಾರಣಕ್ಕೆ ಎಳೆದು ತಂದಿರುವುದು ಹಾಗೂ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ಅವರು ಒತ್ತಾಯಿಸಿದ್ದಾರೆ.
I thought it was only those who need 2 minute fame and indulge in yellow journalism speak this language. But here, I see an absolute disgrace to womanhood. Konda Surekha garu, I am sure some values were instilled in you. Where have they flown out of the window? A person in a…
— KhushbuSundar (@khushsundar) October 2, 2024
2 ನಿಮಿಷಗಳ ಖ್ಯಾತಿಯ ಅಗತ್ಯವಿರುವವರು ಮತ್ತು ಕಳಪೆ ಪತ್ರಿಕೋದ್ಯಮದಲ್ಲಿ ತೊಡಗಿರುವವರು ಮಾತ್ರ ಈ ಭಾಷೆ ಮಾತನಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಇಲ್ಲಿ ಮಹಿಳೆಯೊಬ್ಬರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೊಂಡಾ ಸುರೇಖಾ ಅವರೇ, ನಿಮ್ಮಲ್ಲಿ ಕೆಲವು ಮೌಲ್ಯಗಳು ಇರಬೇಕಾಗಿತ್ತು. ನೀವು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ. ನನ್ನ ಉದ್ಯಮ, ನನ್ನ ಆರಾಧನ ಜಾಗದ ಆಧಾರರಹಿತ, ಭಯಾನಕ ಮತ್ತು ಕೀಳುಮಟ್ಟದ ಹೇಳಿಕೆಗಳನ್ನು ನೀಡಬಾರದು ಎಂದು ಖುಷ್ಬೂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿನಿಮಾ ಇಂಡಸ್ಟ್ರಿ ಇನ್ನು ಮುಂದೆ ಇಂತಹ ನಿಂದನೆಗೆ ನಾನು ಮೂಕ ಪ್ರೇಕ್ಷಕನಾಗಿರುವುದಿಲ್ಲ. ಇಂತಹ ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡಿರುವುದಕ್ಕಾಗಿ ನೀವು ಚಲನಚಿತ್ರೋದ್ಯಮದ ಕ್ಷಮೆಯಾಚಿಸಬೇಕು. ಪ್ರಜಾಪ್ರಭುತ್ವವು ಏಕಮುಖ ಸಂಚಾರವಲ್ಲ. ಆದರೆ ನಾವು ನಿಮ್ಮ ಮಟ್ಟಕ್ಕೆ ಇಳಿಯಬಾರದು ಎಂದು ಹೇಳಿದರು.
ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನಕ್ಕೆ ಬಿಆರ್‌ಎಚ್ ಅಧ್ಯಕ್ಷ ಕೆ.ಟಿ.ರಾಮರಾವ್ ಕಾರಣ ಎಂದು ಕೊಂಡಾ ಸುರೇಖಾ ಹೇಳಿದ್ದರು ಇದು ವಿವಾದದ ಅಲೆಯನ್ನು ಹುಟ್ಟುಹಾಕಿದೆ. ಸುರೇಖಾ ಅವರ ಪ್ರಕಾರ, ಕೆಟಿಆರ್ ಅವರ ಹಸ್ತಕ್ಷೇಪವು ಅಕ್ಕಿನೇನಿ ಕುಟುಂಬದಲ್ಲಿ ತೊಂದರೆಗಳನ್ನು ಉಂಟುಮಾಡಿತು. ಇದು ಅಂತಿಮವಾಗಿ ಉನ್ನತ ಮಟ್ಟದ ವಿಚ್ಛೇದನಕ್ಕೆ ಕಾರಣವಾಯಿತು.
ನಾಗಾರ್ಜುನ ಅಕ್ಕಿನೇನಿ ಅವರ ಎನ್-ಕನ್ವೆನ್ಷನ್ ಸೆಂಟರ್ ಅನ್ನು ನೆಲಸಮ ಮಾಡುವುದನ್ನು ತಪ್ಪಿಸಲು ಸಮಂತಾ ಅವರನ್ನು ತಮ್ಮ ಬಳಿಗೆ ಕಳುಹಿಸಬೇಕೆಂದು ಕೆ.ಟಿ. ರಾಮರಾವ್ ಒತ್ತಾಯಿಸಿದ್ದರು. ಅದಕ್ಕೆ ಸಮಂತಾ ನಿರಾಕರಿಸಿದ್ದರು. ಅದು ನಾಗ ಚೈತನ್ಯ ಅವರಿಂದ ಬೇರ್ಪಡಲು ಕಾರಣವಾಯಿತು ಎಂದು ಸುರೇಖಾ ಹೇಳಿದ್ದರು. ಇದುವ ವಿವಾದಕ್ಕೆ ಕಾರಣವಾಯಿತು.
ಇದನ್ನೂ ಓದಿ: Samantha Ruth Prabhu : ತಮ್ಮ ವಿಚ್ಛೇದನ ಕುರಿತು ವಿವಾದಾತ್ಮಕವಾಗಿ ಮಾತನಾಡಿದ ತೆಲಂಗಾಣ ಸಚಿವೆಗೆ ತಿರುಗೇಟು ಕೊಟ್ಟ ಸಮಂತಾ
ಈ ಹೇಳಿಕೆಗೆ ಸಮಂತಾ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಅವರು ರಾಜಕೀಯ ನಾಯಕರನ್ನುದ್ದೇಶಿಸಿ ಮಾತನಾಡುತ್ತಾ, “ಕೊಂಡಾ ಸುರೇಖಾ ಅವರೇ, ಈ ಪ್ರಯಾಣವು ನನ್ನನ್ನು ಯಾವ ಸ್ಥಿತಿಗೆ ಬಂದಿಗೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ. ದಯವಿಟ್ಟು ಅದನ್ನು ಕ್ಷುಲ್ಲಕಗೊಳಿಸಬೇಡಿ. ಸಚಿವರಾಗಿ ನಿಮ್ಮ ಮಾತುಗಳಿಗೆ ಮಹತ್ವವಿದೆ ಎಂದು ನೀವು ಅರಿತುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಜವಾಬ್ದಾರಿಯುತವಾಗಿ ಮತ್ತು ವ್ಯಕ್ತಿಗಳ ಗೌಪ್ಯತೆಯನ್ನು ಗೌರವಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದರು.