ರಿಜಿಜು ಅವರು ಅಕ್ಟೋಬರ್ 29, 2019 ರಂದು ಅರುಣಾಚಲಕ್ಕೆ ಭೇಟಿ ನೀಡಿರುವ ಭೇಟಿಯ ಸ್ವಲ್ಪ ವಿಭಿನ್ನ ಕೋನದಿಂದ ತೆಗೆದ ಮತ್ತೊಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಭಾರತವು ಚೀನಾದ ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ. ಚೀನಾ ಯುದ್ಧಕ್ಕೆ ತಯಾರಿ ನಡೆಸು ತ್ತಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಾಮೆಂಟ್‌ಗೆ ಪ್ರತಿಕ್ರಿಯೆಯಾಗಿ ರಿಜಿಜು ಹಳೆಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಟ್ವೀಟ್‌ನಲ್ಲಿ ರಿಜಿಜು ಅವರು ರಾಹುಲ್ ಗಾಂಧಿ ಅವರು ಸೇನೆಯನ್ನು ಅವಮಾನಿಸಿದ್ದಾರೆ ಮಾತ್ರವಲ್ಲದೆ ತಮ್ಮ ಹೇಳಿಕೆಗಳಿಂದ ಭಾರತದ ಇಮೇಜ್‌ಗೆ ಹಾನಿ ಮಾಡಿದ್ದಾರೆ ಎಂದು ಹೇಳಿದ್ದರು.
ಅರುಣಾಚಲ ಪ್ರದೇಶದಲ್ಲಿ ಸೈನಿಕರೊಂದಿಗೆ ಕಾನೂನು ಸಚಿವ ರಿಜಿಜು ನಿಂತಿರುವ ಫೋಟೋವನ್ನು ಒಳಗೊಂಡಿರುವ ಮತ್ತೊಂದು ಟ್ವೀಟ್‌ನಲ್ಲಿ, “ಭಾರತೀಯ ಸೇನೆಯ ಕೆಚ್ಚೆದೆಯ ಜವಾನರ ಸಮರ್ಪಕ ನಿಯೋ ಜನೆಯಿಂದಾಗಿ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರುವ ಯಾಂಗ್ಟ್ಸೆ ಪ್ರದೇಶವು ಈಗ ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂದು ಹೇಳಿದ್ದಾರೆ.
“ನನಗೆ ನೆನಪಿರುವಂತೆ ಇದೇ ಚಿತ್ರವನ್ನು ಮೂರು ವರ್ಷಗಳ ಹಿಂದೆ ಹಾಕಲಾಗಿತ್ತು ನಾಚಿಕೆಯಿಲ್ಲದ ವಿರೂಪಕ” ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.
ಕೆಲವರು ಕಾನೂನು ಸಚಿವರು ಕೇವಲ ಪ್ರದೇಶದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಹಾಗೂ ಇದು ಪ್ರಸ್ತುತ ಫೋಟೋ ಎಂದು ಎಂದಿಗೂ ಹೇಳಿಲ್ಲ ಎಂದಿದ್ದಾರೆ.
Read E-Paper click here