Saturday, 14th December 2024

ಗಾಳಿಪಟ ಹಾರಿಸುವ ಮಾಂಜಾ ದಾರಗಳ ಬಳಕೆಗೆ ನಿಷೇಧ

ಚೆನ್ನೈ: ನೈಲಾನ್, ಪ್ಲಾಸ್ಟಿಕ್ ಅಥವಾ ಇನ್ನಾವುದೇ ಕೃತಕ ವಸ್ತುಗಳಿಂದ ತಯಾರಿಸಿದ ‘ಮಾಂಜಾ ದಾರಗಳು’ ಎಂದು ಜನಪ್ರಿಯ ವಾಗಿರುವ ಗಾಳಿಪಟ ಹಾರಿಸುವ ದಾರಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ತಮಿಳುನಾಡು ಸರ್ಕಾರವು ಸಂಪೂರ್ಣ ನಿಷೇಧಿಸಿದೆ.

ಗಾಳಿಪಟ ಹಾರಿಸುವ ಸ್ಪರ್ಧೆಗಳಲ್ಲಿ ಅಥವಾ ಇತರ ಸಂದರ್ಭಗಳಲ್ಲಿ ಜನರು, ಪ್ರಾಣಿಗಳು ಮತ್ತು ವಿಶೇಷವಾಗಿ ಪಕ್ಷಿಗಳ ಗಾಯ ಮತ್ತು ಕೆಲವೊಮ್ಮೆ ಸಾವು ಗಳನ್ನು ತಡೆಯಲು ಇದು ಒಂದು ಹೆಜ್ಜೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.

ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಹೊರಡಿಸಿದ ಹೇಳಿಕೆಯ ಪ್ರಕಾರ, ಅಕ್ಟೋಬರ್ 6, 2023 ರಂದು ರಾಜ್ಯ ಸರ್ಕಾರವು ಈ ಕುರಿತು ಆದೇಶವನ್ನು ಹೊರಡಿಸಿದೆ. ಇದನ್ನು ಅಕ್ಟೋಬರ್‌ನಲ್ಲಿ ತಮಿಳುನಾಡು ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಗಾಳಿಪಟ ಹಾರಿಸುವ ಸ್ಪರ್ಧೆಗಳಲ್ಲಿ ಅಥವಾ ಇತರ ಸಂದರ್ಭಗಳಲ್ಲಿ ಜನರು, ಪ್ರಾಣಿಗಳು ಮತ್ತು ವಿಶೇಷವಾಗಿ ಪಕ್ಷಿಗಳ ಗಾಯ ಮತ್ತು ಕೆಲವೊಮ್ಮೆ ಸಾವನ್ನು ತಡೆಯಲು ಈ ಉಪಕ್ರಮವು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಬರೆದಿದ್ದಾರೆ.