Monday, 6th January 2025

Knowledge Bridge: ಮೆರಿಲ್ ಬಹು ನಗರಗಳಲ್ಲಿ ಆಯೋಜಿಸಿದ್ದ ‘ಕೀಸರ್ಜ್ ನಾಲೆಡ್ಜ್ ಬ್ರಿಡ್ಜ್’ ಕಾರ್ಯಕ್ರಮ ಬೆಂಗಳೂರಿನಲ್ಲಿ ಸಮಾರೋಪ

ಮೆರಿಲ್ ಅಕಾಡೆಮಿಯು ದೆಹಲಿ ಮತ್ತು ಮುಂಬೈನಾದ್ಯಂತ ನಡೆದಿದ್ದ ಕೀಸರ್ಜ್ ನಾಲೆಡ್ಜ್ ಬ್ರಿಡ್ಜ್ ಕಾರ್ಯಕ್ರಮ ವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿಯೂ ಯಶಸ್ವಿಯಾಗಿ ಆಯೋಜಿಸಿತ್ತು.

ಬೆಂಗಳೂರು ಆವೃತ್ತಿಯ ಕಾರ್ಯಕ್ರಮವು ಎಲ್ಲಾ ನಗರಗಳಲ್ಲಿ ನಡೆದ ಕಾರ್ಯಕ್ರಮಕ್ಕಿಂತ ಬೃಹತ್ತಾಗಿ ಆಯೋಜನೆ ಗೊಂಡಿದ್ದು, ಕಾರ್ಯಕ್ರಮದಲ್ಲಿ ಓಟಿ ಸ್ಟೋರ್ ಮ್ಯಾನೇಜರ್‌ಗಳು, ಓಟಿ ಮುಖ್ಯಸ್ಥರು, ಪೂರೈಕೆ ಸರಪಳಿ ವ್ಯವಸ್ಥಾಪ ಕರು ಮತ್ತು ಹಲವು ಪ್ರಮುಖ ಆಸ್ಪತ್ರೆಗಳ ಖರೀದಿ ಮುಖ್ಯಸ್ಥರು ಸೇರಿದಂತೆ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು.

ಪ್ರತಿಷ್ಠಿತ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹೆಚ್‌ಸಿಜಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಪ್ರಭು ನಾಸರ್ಗಿಕರ್ ಮತ್ತು ಕಾವೇರಿ ಆಸ್ಪತ್ರೆಯ ಜಿಐ ಸರ್ಜರಿ ವಿಭಾಗದ ನಿರ್ದೇಶಕ ಡಾ. ಗಣೇಶ್ ಶೆಣೈ ದಾಸ್ತಾನು ನಿರ್ವಹಣೆ ಮತ್ತು ಪೂರೈಕೆ ಸರಪಳಿ ವಿಭಾಗದಲ್ಲಿನ ಬೆಳವಣಿಗೆಗಳ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು.

ಡಾ. ಅಬೆಲ್ ಆಸಿರ್ವತಮ್ ಅವರು ಆಪರೇಷನ್ ಥಿಯೇಟರ್‌ ಗಳಲ್ಲಿನ ಗುಣಮಟ್ಟ ವಿಚಾರದ ಕುರಿತು ಮಾತನಾಡಿ ದರು. ಮೆರಿಲ್ ನ ಮಾರಾಟ ಮತ್ತು ಮಾರ್ಕೆಟಿಂಗ್ ವಿಭಾಗದ ಬಿಸಿನೆಸ್ ಹೆಡ್ ನಿತಿನ್ ಠಾಕೂರ್ ಅವರು “ಹೆಲ್ತ್‌ ಕೇರ್ ಟ್ರೆಂಡ್‌ ಗಳು ಮತ್ತು ಮೆರಿಲ್ ಭಾರತದ ಹೆಲ್ತ್‌ ಕೇರ್ ಅಭಿಯಾನದಲ್ಲಿ ಹೇಗೆ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ” ಎಂಬುದರ ಕುರಿತು ಮಾತನಾಡಿದರು, ಈ ಮೂಲಕ ಭಾರತ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮೆರಿಲ್ ನ ಮಹತ್ವದ ಪಾತ್ರದ ಕುರಿತು ತಿಳಿಸಿದರು.

ಮುಂಬೈನಲ್ಲಿ ಮ್ಯಾಕ್ಸ್ ನಾನಾವತಿ ಆಸ್ಪತ್ರೆಯ ಡಾ. ಮನಮೋಹನ್ ಕಾಮತ್ ಮತ್ತು ಗೋದ್ರೇಜ್ ಮೆಮೋರಿಯಲ್ ಆಸ್ಪತ್ರೆಯ ಶ್ರೀಮತಿ ನೀತಾ ಪವಾರ್ ಅವರಂತಹ ಪ್ರತಿಷ್ಠಿತರು ಶಸ್ತ್ರಚಿಕಿತ್ಸಕರ ನಿರೀಕ್ಷೆಗಳು ಮತ್ತು ದಾಸ್ತಾನು ನಿರ್ವ ಹಣೆ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮಗಳಲ್ಲಿ ಆರೋಗ್ಯ ಸೇವಾ ಕ್ಷೇತ್ರದ ಒಟ್ಟು 250 ಮಂದಿ ಪಾಲ್ಗೊಂಡರು.

ದೆಹಲಿ ಆವೃತ್ತಿಯಲ್ಲಿ ಸರ್ ಗಂಗಾರಾಮ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಶಗುನ್ ಅಗರ್ವಾಲ್, ಫೋರ್ಟಿಸ್ ಗುರುಗ್ರಾಮ್‌ ನ ಎಸ್‌ಸಿಎಂ ಮುಖ್ಯಸ್ಥ ಶ್ರೀ ವಿಕಾಸ್ ಗೋಯಲ್ ಮತ್ತು ಆರ್‌ಜಿಸಿಐನ ಕನ್ಸಲ್ಟೆಂಟ್ ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಶ್ರೀ ಸುಧೀರ್ ವರ್ಮಾ ಸೇರಿದಂತೆ ಅನೇಕರು ಉಪನ್ಯಾಸ ನೀಡಿದರು.