Thursday, 26th December 2024

Lalu Prasad Yadav: ಮಹಿಳೆಯರನ್ನು ನೋಡೋಕೆ ನಿತೀಶ್‌ ಯಾತ್ರೆ-ನಾಲಿಗೆ ಹರಿಬಿಟ್ಟ ಲಾಲೂ

Lalu Prasad Yadav

ಪಾಟನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಮಂಗಳವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ವಿರುದ್ಧ ಅಸಭ್ಯ ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡುವಾಗ ಯಾದವ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ವೇಳೆ “ನಿತೀಶ್‌ ಮಹಿಳೆಯರನ್ನು ನೋಡುತ್ತಿದ್ದಾರೆ” ಎಂದು ಮುಖ್ಯಮಂತ್ರಿಯ ಯೋಜಿತ ಮಹಿಳಾ ಸಂವಾದ್‌ ಯಾತ್ರೆಯ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.

ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಡಿಸೆಂಬರ್ 15 ರಂದು ಪ್ರಾರಂಭವಾಗಲಿರುವ ಮಹಿಳಾ ಸಂವಾದ ಯಾತ್ರೆ ಬಿಹಾರದ ಮಹಿಳೆಯರೊಂದಿಗೆ ನೇರ ಸಂಪರ್ಕವನ್ನು ಬೆಸೆಯಲಿದೆ. ಸ್ಥಳೀಯ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಆಡಳಿತದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಲು ಈ ಯಾತ್ರೆಯ ಯೋಜನೆ ಮಾಡಲಾಗಿದೆ.

ನಿತೀಶ್ ಕುಮಾರ್ ಕುರಿತು ಲಾಲು ಯಾದವ್ ಅವರ ಹೇಳಿಕೆಯನ್ನು ಜನತಾ ದಳ (ಯುನೈಟೆಡ್) ನ ಹಿರಿಯ ನಾಯಕ ರಾಜೀವ್ ರಂಜನ್ ತೀವ್ರವಾಗಿ ಟೀಕಿಸಿದ್ದಾರೆ. ಈ ಹಿಂದೆ ಬಿಹಾರದ ಜನರು ತಮ್ಮನ್ನು ಹೇಗೆ ಸಹಿಸಿಕೊಂಡಿದ್ದರು ಎಂಬುದು ನನಗೆ ತಿಳಿದಿಲ್ಲ. ಇವರು ಹೀನಾಯ ಮನಸ್ಥಿತಿಯ ವ್ಯಕ್ತಿಗಳು. ಅವರ ನಿಜವಾದ ಗುಣ ಈಗ ಬಯಲಾಗಿದೆ ಎಂದು ಅವರು ಹೇಳಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಸಂಸದ ಪ್ರಿಯಾಂಕಾ ಚತುರ್ವೇದಿ ಅವರು ಯಾದವ್‌ ಹೇಳಿಕೆಗೆ ತೀವೃ ವಿರೋಧ ವ್ಯಕ್ತ ಪಡಿಸಿದ್ದು, ಇದು ಕಾಮಪ್ರಚೋದಕ ಹೇಳಿಕೆಯಾಗಿದೆ. ಯಾದವ್‌ ಕುಟುಂಬಸ್ಥರಾದರೂ , ಇವರಿಗೆ ತಿಳಿ ಹೇಳಬಾರದೇ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುತ್ತೇನೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಬ್ಲಾಕ್ ಅನ್ನು ಮುನ್ನಡೆಸುವ ಬಗ್ಗೆ ಕಾಂಗ್ರೆಸ್‌ ಆಕ್ಷೇಪ ಕುರಿತು ಪ್ರತಿಕ್ರಿಯಿಸಿದ ಲಾಲು “ಕಾಂಗ್ರೆಸ್‌ಗೆ ಯಾವುದೇ ಆಕ್ಷೇಪಣೆ ಇಲ್ಲ, ನಾವು ಮಮತಾ ಅವರನ್ನು ಬೆಂಬಲಿಸುತ್ತೇವೆ. ಮಮತಾ ಬ್ಯಾನರ್ಜಿ ಅವರಿಗೆ ನಾಯಕತ್ವ ನೀಡಬೇಕು. ನಾವು 2025 ರಲ್ಲಿ ಮತ್ತೆ ಸರ್ಕಾರವನ್ನು ರಚಿಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Pralhad Joshi: ಮಮತಾ ಬ್ಯಾನರ್ಜಿ ಡ್ರಾಮಾ ಬಿಟ್ಟು ರಾಜೀನಾಮೆ ನೀಡಲಿ : ಪ್ರಲ್ಹಾದ್‌ ಜೋಶಿ