Thursday, 24th October 2024

ಕರೋನಾ: 538 ದಿನಗಳಲ್ಲಿಯೇ ಅತಿ ಕಡಿಮೆ

#corona

ನವದೆಹಲಿ: ಭಾರತದಲ್ಲಿ ಕರೋನಾ ಅಬ್ಬರ ಸೋಮವಾರ ಇಳಿಕೆಯಾಗಿದೆ. ಸೋಮವಾರ ಕೊನೆಗೊಂಡ 24 ತಾಸುಗಳ ಅವಧಿ ಯಲ್ಲಿ 8 ಸಾವಿರದ 488 ಪ್ರಕರಣಗಳು ದೃಢಪಟ್ಟಿದ್ದು, 249 ಮಂದಿ ಮೃತಪಟ್ಟಿದ್ದಾರೆ.

ಕಳೆದ 538 ದಿನಗಳಲ್ಲಿಯೇ ಅತಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿಅಂಶ ತಿಳಿಸಿದೆ.

ಸಕ್ರಿಯ ಸೋಂಕಿತರ ಸಂಖ್ಯೆ 1 ಲಕ್ಷದ 18 ಸಾವಿರದ 443 ಇದ್ದು, ಕಳೆದ 534 ದಿನಗಳಲ್ಲಿಯೇ ಅತಿ ಕಡಿಮೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಶೇ.1ಕ್ಕಿಂತ ಕಡಿಮೆಯಿದ್ದು, 12 ಸಾವಿರದ 510 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

8 ಸಾವಿರದ 488 ಹೊಸ ಪ್ರಕರಣಗಳಲ್ಲಿ ಕೇರಳ ರಾಜ್ಯದಲ್ಲಿ 5 ಸಾವಿರದ 80 ಮಂದಿ ಕೇಸು ಗಳು ವರದಿಯಾಗಿದ್ದು, 7 ಸಾವಿರದ 908 ಮಂದಿ ಗುಣಮುಖರಾಗಿದ್ದು 40 ಮಂದಿ ಮೃತ ಪಟ್ಟಿದ್ದಾರೆ.

ಭಾರತದಲ್ಲಿ ಒಂದೇ 7 ಲಕ್ಷದ 83 ಸಾವಿರದ 567 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, 63 ಕೋಟಿಯ 25 ಲಕ್ಷದ 24 ಸಾವಿರದ 259 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಇಲ್ಲಿಯವರೆಗೂ ಒಟ್ಟಾರೆ 116.87 ಕೋಟಿ ಲಸಿಕೆ ಡೋಸ್ ನ್ನು ನೀಡಲಾಗಿದೆ ಎಂದು ತಿಳಿಸಿದೆ.