ಚೆನ್ನೈ: ಇಬ್ಬರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದ ಪರಿಣಾಮವಾಗಿ ತಮಿಳುನಾಡಿನ ಅರಿಯಲೂರು ಜಿಲ್ಲೆಯ ಅವರ ಶಾಲೆಯ ಬಳಿ ಇರುವ ಮದ್ಯದ ಅಂಗಡಿಯನ್ನು ಮುಚ್ಚಲಾಗಿದೆ.
ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಇಬ್ಬರು ಶಾಲಾ ವಿದ್ಯಾರ್ಥಿಗಳು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಮನವಿ ಮಾಡಿದ್ದರು.
ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದ ವಿದ್ಯಾರ್ಥಿಗಳು ಒಡಹುಟ್ಟಿದವರು. ಇವರು 6 ನೇ ತರಗತಿ ಮತ್ತು 4 ನೇ ತರಗತಿಯಲ್ಲಿ ಓದುತ್ತಿದ್ದಾರೆ. ನವೆಂಬರ್‌ನಲ್ಲಿ ಪ್ರಾಥಮಿಕ ವಿಭಾಗಕ್ಕೆ ಭೌತಿಕ ತರಗತಿ ಗಳನ್ನು ಮತ್ತೆ ತೆರೆಯುವ ಮೊದಲು ಕಲೆಕ್ಟರ್‌ನಿಂದ ಅಂಗಡಿಯನ್ನು ಬಂದ್ ಮಾಡುವಂತೆ ಮನವಿ ಮಾಡಿದ್ದರು.
ಶಾಲೆ ಬಳಿಯಿರುವ ಮದ್ಯದ ಅಂಗಡಿಯಲ್ಲಿ ಜನ ಸೇರುತ್ತಾರೆ. ಎಲ್ಲರೂ ಅಲ್ಲಿ ಕುಳಿತು ಕುಡಿಯುತ್ತಾರೆ. ಜೊತೆಗೆ ಅಲ್ಲಿ ಕುಳಿತು ಅಸಭ್ಯ ಭಾಷೆಯನ್ನು ಬಳಸುತ್ತಾರೆ. ನಮಗೆ ತುಂಬಾ ಭಯವಾಗುತ್ತದೆ” ಎಂದು ಹೇಳಿದ್ದಾರೆ.
ಕುಡುಕರು ಸಾಮಾನ್ಯವಾಗಿ ಶಾಲೆಯ ಕಾಂಪೌಂಡ್‌ಗಳ ಸುತ್ತಲೂ ಮಲಗುತ್ತಾರೆ ಮತ್ತು ಅವರು ನಮ್ಮ ಆವರಣದ ಬಳಿ ಮದ್ಯದ ಬಾಟಲಿಗಳನ್ನು ಸಹ ಎಸೆಯುತ್ತಾರೆ. ಇದು ನಮ್ಮ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಮದ್ರಾಸ್ ಹೈಕೋರ್ಟ್ 2015 ರಲ್ಲಿ ಶಾಲೆಯ 100 ಮೀಟರ್ ಒಳಗೆ ಯಾವುದೇ ಮದ್ಯ ಇರಬಾರದು ಎಂದು ತೀರ್ಪು ನೀಡಿತ್ತು. ಆದರೆ ಕೆಲವು ಕಡೆ ಈ ಆದೇಶವನ್ನು ಉಲ್ಲಂಘಿಸಲಾಗಿದೆ. ಆದರೆ ಮಕ್ಕಳು ದೂರು ನೀಡಿದ ಮದ್ಯದಂಗಡಿ 100 ಮೀಟರ್ ದೂರದಲ್ಲಿ ಇದ್ದರೂ, ಮಕ್ಕಳ ಮನವಿಯ ನಂತರ ಅದನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿ ನಿರ್ಧರಿಸಿದರು.