Saturday, 14th December 2024

ಜುಲೈ 1ರವರೆಗೆ ಲಾಕ್ ಡೌನ್ ವಿಸ್ತರಿಸಿದ ಮಮತಾ ಬ್ಯಾನರ್ಜಿ

ಕೋಲ್ಕತಾ: ಕೋವಿಡ್ 19 ಪರಿಸ್ಥಿತಿ ಪರಿಶೀಲಿಸಿದ ನಂತರ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ, ಜುಲೈ 1ರವರೆಗೆ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಿದ್ದಾರೆ.

ನೂತನ ಮಾರ್ಗಸೂಚಿ ಪ್ರಕಾರ, ಜೂ.16ರಿಂದ ಎಲ್ಲಾ ಸರ್ಕಾರಿ ಕಚೇರಿಗಳು ಶೇ.25ರಷ್ಟು ಸಿಬಂದಿಗಳೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆಯಾ ಇಲಾಖೆಯ ಮುಖ್ಯಸ್ಥರು ಕೆಲಸದ ಸಮಯದ ಹಂಚಿಕೆ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ. ಸಂಚಾರಕ್ಕೆ ಇ-ಪಾಸ್ ಅಗತ್ಯವಿದೆ ಎಂದು ವಿವರಿಸಿದೆ. ಪಾರ್ಕ್ಸ್ ಗಳು ಬೆಳಗ್ಗೆ 6ಗಂಟೆಯಿಂದ 9ಗಂಟೆವರೆಗೆ ತೆರೆಯಲಾಗುವುದು.

ಯಾರು ಕೋವಿಡ್ 19 ಲಸಿಕೆ ತೆಗೆದುಕೊಂಡಿದ್ದಾರೋ ಅಂತಹ ವ್ಯಕ್ತಿಗಳಿಗೆ ಮಾತ್ರ ಪಾರ್ಕ್ ಒಳಗೆ ಹೋಗಲು ಅನುಮತಿ ನೀಡಲಾಗುವುದು ಎಂದು ವರದಿ ವಿವರಿಸಿದೆ. ಎಲ್ಲಾ ಮಾರುಕಟ್ಟೆ, ಬಜಾರ್ ಗಳು ಬೆಳಗ್ಗೆ 7ಗಂಟೆಯಿಂದ 11ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಇನ್ನಿತರ ಸಣ್ಣ ಅಂಗಡಿಗಳು 11ರಿಂದ ಸಂಜೆ 6ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದು ವರದಿ ತಿಳಿಸಿದೆ.