Saturday, 23rd November 2024

ಉತ್ತರ ಪ್ರದೇಶದಲ್ಲಿ ಸಂಪೂರ್ಣ ಲಾಕ್‌ಡೌನ್‌…ಮಾಸ್ಕ್‌ ಹಾಕದಿದ್ದರೆ ಇಷ್ಟು ದಂಡ…!

ಲಖನೌ: ಉತ್ತರ ಪ್ರದೇಶ ಸರ್ಕಾರ ಪ್ರತಿ ಭಾನುವಾರ ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಲಾಕ್​ಡೌನ್ ಮಾಡಬೇಕೆಂದು ಆದೇಶ ಹೊರಡಿಸಿದೆ.

ಮಾಸ್ಕ್​ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವವರಿಗೆ 1000 ರೂಪಾಯಿ ದಂಡ ಹಾಗೂ ದಂಡ ವಿಧಿಸದ ಬಳಿಕವೂ ತಪ್ಪು ಮರುಕಳಿಸಿದಲ್ಲಿ ದಂಡ ಮೊತ್ತಕ್ಕಿಂತ 10 ಪಟ್ಟು ಹೆಚ್ಚು ಹಣ ವಸೂಲಿ ಮಾಡುವಂತೆ ಸೂಚನೆ ನೀಡಲಾಗಿದೆ.

ಸ್ಯಾನಿಟೈಸೇಷನ್​ ಹಾಗೂ ತುರ್ತು ಸೇವೆಗಳು ಮಾತ್ರ ಈ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಉತ್ತರ ಪ್ರದೇಶ ಸಿಎಂ ಸಚಿವಾಲಯ ಹೇಳಿಕೆ ನೀಡಿದೆ. ದೇಶದಲ್ಲಿ ಅತಿ ಹೆಚ್ಚು ಕರೋನಾ ಕೇಸ್​ಗಳನ್ನ ಹೊಂದಿರುವ ಟಾಪ್​ 10 ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೂಡ ಒಂದು. ಉತ್ತರ ಪ್ರದೇಶದಲ್ಲಿ ಗುರುವಾರ 22,439 ಹೊಸ ಕೇಸ್​ಗಳು ದಾಖಲಾಗಿವೆ.

10 ರಾಜ್ಯಗಳ ನೈಟ್​ ಕರ್ಫ್ಯೂ ಅವಧಿಯಲ್ಲೂ ಬದಲಾವಣೆ ಮಾಡಿದೆ. ಇದೀಗ ರಾತ್ರಿ 8 ರಿಂದ ಬೆಳಗ್ಗೆ 7 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಕರೋನಾ ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆ ಈ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ.