-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಲಂಡನ್ ಫ್ಯಾಷನ್ ವೀಕ್‌ನಲ್ಲಿ ಈ ಬಾರಿ ಸ್ಟ್ರೀಟ್ ಸ್ಟೈಲ್ ಫ್ಯಾಷನ್ ಎಲ್ಲರ ಗಮನ ಸೆಳೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ನಡೆದ ಲಂಡನ್ ಫ್ಯಾಷನ್ ವೀಕ್‌ನಲ್ಲಿ (London fashion week 2024) ಪ್ರಪಂಚದೆಲ್ಲೆಡೆಯಿಂದ ಆಗಮಿಸಿದ್ದ ಹೈ ಸ್ಟ್ರೀಟ್ ಫ್ಯಾಷನ್ ಬ್ರಾಂಡ್‌ಗಳು ಹಾಗೂ ಡಿಸೈನರ್‌ಗಳು (Designers) ಭಾಗವಹಿಸಿದ್ದರು. ಬ್ರಾಂಡ್ ಹಾಗೂ ಡಿಸೈನರ್‌ಗಳ ವಿಶೇಷ ಉಡುಗೆಗಳನ್ನು ಧರಿಸಿದ ಸೆಲೆಬ್ರಿಟಿಗಳು (Celebrities) ಹಾಗೂ ಮಾಡೆಲ್‌ಗಳು ರ‍್ಯಾಂಪ್ ಮೇಲೆ ಮಾತ್ರವಲ್ಲ, ಬೀದಿ ಬದಿಯಲ್ಲಿ, ಫುಟ್‌ಬಾತ್‌ನಲ್ಲಿ ಅಂದರೆ, ಹೈ ಸ್ಟ್ರೀಟ್‌ನಲ್ಲಿ ಕಾಣಿಸಿಕೊಂಡು ವಾಕ್ ಮಾಡಿದರು. ಇದು ಈ ಬಾರಿಯ ವಿಶೇಷತೆಗಳಲ್ಲಿ ಸೇರಿತ್ತು.
ಇದು ಲಂಡನ್ ಸಮ್ಮರ್-ಸ್ಪ್ರಿಂಗ್ ಸೀಸನ್ ಫ್ಯಾಷನ್
ನಮ್ಮಲ್ಲಿ ಮಾನ್ಸೂನ್ ಇದ್ದರೂ ಅಲ್ಲಿನ ವಾತಾವರಣ ಬೇರೆ. ಅಲ್ಲಿ ಈಗಷ್ಟೇ ಸಮ್ಮರ್ ಸೀಸನ್ ಮುಗಿಯುವ ಹಂತದಲ್ಲಿದೆ. ಫ್ಯಾಷನ್ ವೀಕ್ ಅದೇ ಹೆಸರಲ್ಲಿ ನಡೆಯುತ್ತದೆ. ಹಾಗಾಗಿ ಕನ್‌ಫ್ಯೂಸ್ ಆಗಬೇಕಾಗಿಲ್ಲ. ಆಯಾ ರಾಷ್ಟ್ರದ ವೈವಿಧ್ಯತೆಗೆ ಹಾಗೂ ಫ್ಯಾಷನ್ ಲೋಕದ ಡಿಕ್ಲೇರೇಷನ್‌ಗೆ ತಕ್ಕಂತೆ ಈ ಫ್ಯಾಷನ್ ವೀಕ್‌ಗಳು ನಡೆಯುತ್ತವೆ. ಡಿಸೈನರ್‌ವೇರ್‌ಗಳು ಅನಾವರಣಗೊಳ್ಳುತ್ತವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ಜೆನ್. ಅವರ ಪ್ರಕಾರ, ಲಂಡನ್ ಫ್ಯಾಷನ್ ವೀಕ್‌ನಲ್ಲಿ ಇತ್ತೀಚೆಗೆ ನಮ್ಮ ಬಾಲಿವುಡ್ ತಾರೆಯರು ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎನ್ನುತ್ತಾರೆ.
ಬಾಲಿವುಡ್ ನಟಿ ಕೃತಿ ಸನೂನ್ ಸ್ಟ್ರೀಟ್ ಸ್ಟೈಲ್
ಬಾಲಿವುಡ್ ನಟಿ ಕೃತಿ ಸನೂನ್ ಲಂಡನ್ ಫ್ಯಾಷನ್ ವೀಕ್‌ನ ಸ್ಪ್ರಿಂಗ್-ಸಮ್ಮರ್ ಸ್ಟ್ರೀಟ್ ಫ್ಯಾಷನ್ ಉಡುಪುಗಳಲ್ಲಿ ಕಾಣಿಸಿಕೊಂಡರು. ಪ್ರತಿಷ್ಠಿತ ಬರ್ಬೆರಿ ಬ್ರಾಂಡ್‌ನ ಸ್ಟ್ರೀಟ್ ಸ್ಟೈಲ್‌ವೇರ್‌ಗಳಲ್ಲಿ ಹೈ ಸ್ಟ್ರೀಟ್ ವಾಕ್ ಮಾಡಿದರು. ಟರ್ಟಲ್ ನೆಕ್ ಮಾನೋಕ್ರೋಮಾಟಿಕ್ ಖಾಕಿ ಶೇಡ್‌ನ ಟ್ರೆಂಚ್ ಕೋಟ್ –ಪ್ಯಾಂಟ್ ಸೆಟ್‌ನಲ್ಲಿ ಕಾಣಿಸಿಕೊಂಡ ಅವರ ಲುಕ್ ಲಂಡನ್ ಸ್ಟ್ರೀಟ್ ಸ್ಟೈಲ್‌ಗೆ ಪರ್ಫೆಕ್ಟಾಗಿ ಹೊಂದುವಂತಿತ್ತು. ಇದರೊಂದಿಗೆ ಅವರ ಸಿಂಪಲ್ ಮೇಕಪ್ ಹೇರ್‌ಸ್ಟೈಲ್ ಎಲಿಗೆಂಟ್ ಲುಕ್ ನೀಡಿತ್ತು.
ಭಾರತದ ಪರ್ಲ್ ಅಕಾಡೆಮಿಯ ಚೊಚ್ಚಲ ಎಂಟ್ರಿ
ಇನ್ನು, ಭಾರತದ ಪರ್ಲ್ ಅಕಾಡೆಮಿಯು ಈ ಬಾರಿಯ ಲಂಡನ್ ಫ್ಯಾಷನ್ ವೀಕ್‌ನಲ್ಲಿ ಡೆಬ್ಯೂ ಎಂಟ್ರಿ ನೀಡಿತು.
ಈ ಸುದ್ದಿಯನ್ನೂ ಓದಿ | Star Fashion: ಟ್ರೆಡಿಷನಲ್ ವೇರ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ಭಾವನಾ ರಾವ್ ಗ್ಲಾಮರಸ್ ಲುಕ್!
ಸ್ಟ್ರೀಟ್‌ಸ್ಟೈಲ್ ಫ್ಯಾಷನ್‌ಗೆ ಆದ್ಯತೆ
ಲಂಡನ್ ಫ್ಯಾಷನ್ ವೀಕ್ ಬಗ್ಗೆ ಹೇಳಬೇಕಾದ ಇನ್ನೊಂದು ವಿಷಯವೆಂದರೇ, ಡೈಲಿ ರುಟಿನ್‌ನಲ್ಲಿ ಧರಿಸುವಂತಹ ಅಟೈರ್‌ಗಳನ್ನು ಹೊಂದಿರುವಂತಹ ಬ್ರಾಂಡ್‌ಗಳ ಸ್ಟ್ರೀಟ್ ಸ್ಟೈಲ್ ಫ್ಯಾಷನ್‌ವೇರ್‌ಗಳಿಗೆ ಆದ್ಯತೆ ನೀಡಲಾಗಿತ್ತು. ಇದು ಇಂದಿನ ಜನರೇಷನ್ ಹುಡುಗ-ಹುಡುಗಿಯರನ್ನು ಸೆಳೆಯಲು ಸಹಕಾರಿ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)