ನವದೆಹಲಿ: ಇತ್ತೀಚಿನ ದಿನದಲ್ಲಿ ಕೆಲಸದ ಒತ್ತಡದಿಂದಾಗಿ ಅನೇಕ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಜ್ಞರೊಬ್ಬರು ಹೇಳಿದ್ದಾರೆ. ಈ ಮಧ್ಯೆ ಲಾರ್ಸೆನ್ & ಟೌಬ್ರೊ (L&T) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರು ಉದ್ಯೋಗಿಗಳು ವಾರಕ್ಕೆ 90 ಗಂಟೆಗಳವರೆಗೆ ಕೆಲಸ ಮಾಡಬೇಕು ಎಂದು ಹೇಳಿದ್ದು ವಿವಾದ ಹುಟ್ಟು ಹಾಕಿತ್ತು. ಈ ನಡುವೆ ದೇಶದಲ್ಲಿ ಕೆಲಸದ ಸಮಯದ ಕುರಿತು ಚರ್ಚೆ ನಡೆಯುತ್ತಿದ್ದುಇದೀಗ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅತೀ ಹೆಚ್ಚು ಕೆಲಸ ಮಾಡುವ ದೇಶಗಳ (Longest Work Hours) ಪಟ್ಟಿಯನ್ನು ಬಿಡುಗಡೆ ಮಾಡಿದೆ.
ವಿಶ್ವದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ದೇಶಗಳಲ್ಲಿ ಭಾರತ 13ನೇ ಸ್ಥಾನದಲ್ಲಿದೆ ಎಂದರೆ ನೀವು ನಂಬುತ್ತೀರಾ? ಹೌದು, ಭಾರತೀಯ ಜನರು ಪ್ರತಿ ವಾರ ಸರಾಸರಿ 46.7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇನ್ನು ಭಾರತದ 51% ಉದ್ಯೋಗಿಗಳು ಪ್ರತಿ ವಾರ 49 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಭೂತಾನ್ನಲ್ಲಿ ಅತೀ ಕಡಿಮೆ ಜನಸಂಖ್ಯೆಯನ್ನು ಇದ್ದರೂ ಇಲ್ಲಿನ ಜನರು ಅತಿ ಹೆಚ್ಚು ಸಮಯ ಕೆಲಸ ಮಾಡುತ್ತಾರೆ. ಹಾಗಾಗಿ ಅತೀ ಹೆಚ್ಚು ಸಮಯ ಕೆಲಸ ಮಾಡುವವರ ಪಟ್ಟಿಯಲ್ಲಿ ಭೂತಾನ್ ಅಗ್ರ ಸ್ಥಾನದಲ್ಲಿದೆ. ಭೂತಾನ್ನಲ್ಲಿರುವ ಉದ್ಯೋಗಿಗಳು ವಾರಕ್ಕೆ ಸರಿಸುಮಾರು 54.4 ಗಂಟೆಗಳ ಕಾಲ ದುಡಿಯುತ್ತಾರೆ.
ಯುಎಇಯಲ್ಲಿನ ಜನರು ವಾರಕ್ಕೆ 50.9 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಾಗಾಗಿ ಕಾರ್ಮಿಕ ಸಂಸ್ಥೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಇದು 2ನೇ ಸ್ಥಾನದಲ್ಲಿದೆ.
ಲೆಸೊಥೊದಲ್ಲಿ ಕಾರ್ಮಿಕರು ಪ್ರತಿ ವಾರ 50.4 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಇದು ವಿಶ್ವದಲ್ಲಿ ವಾರಕ್ಕೆ ಅತೀ ಹೆಚ್ಚು ಕೆಲಸದ ಸಮಯವನ್ನು ಹೊಂದಿರುವ 3ನೇ ದೇಶವಾಗಿದೆ.
ಕಾಂಗೋ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಇಲ್ಲಿನ ನೌಕರರು ವಾರಕ್ಕೆ 48.6 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಸರಾಸರಿ 48 ಗಂಟೆಗಳ ಕಾಲ ಕೆಲಸ ಮಾಡುವ ಕತಾರ್ ಈ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.
ಆರನೇ ಸ್ಥಾನದಲ್ಲಿ ಲೈಬೀರಿಯಾ ಇದ್ದು, ಇಲ್ಲಿನ ಉದ್ಯೋಗಿಗಳು ವಾರಕ್ಕೆ 47.7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಮೌರಿಟಾನಿಯಾ ಜನರು ವಾರಕ್ಕೆ 47.6 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮಾಹಿತಿ ನೀಡಿದೆ.
8ನೇ ಸ್ಥಾನದಲ್ಲಿ ಲೆಬನಾನ್ ಇದ್ದು, ಅಲ್ಲಿನ ಜನರು ವಾರಕ್ಕೆ ಸರಾಸರಿ 47.6 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
9ನೇ ಸ್ಥಾನದಲ್ಲಿ ಮಂಗೋಲಿಯಾ ಇದ್ದು, ಇಲ್ಲಿ ನೌಕರರು ವಾರಕ್ಕೆ 47.3 ಗಂಟೆಗಳ ಕಾಲ ದುಡಿಯುತ್ತಾರೆ. 10ನೇ ಸ್ಥಾನದಲ್ಲಿ ಜೋರ್ಡಾನ್ ಇದ್ದು ಇಲ್ಲಿ ವಾರಕ್ಕೆ ಸರಾಸರಿ 47 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಇದನ್ನು ಓದಿ: Health Tips: ಜೇನುತುಪ್ಪದೊಂದಿಗೆ ಬೆಳ್ಳುಳ್ಳಿಯನ್ನು ಸೇರಿಸಿ ತಿನ್ನುವುದರಿಂದ ಏನೆಲ್ಲ ಲಾಭಗಳಿವೆ ನೋಡಿ