ಮೆಹಬೂಬಾಬಾದ್(ತೆಲಂಗಾಣ) : ಲಾರಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿ ರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಗುಡೂರ್ ವಲಯದ ಮರ್ರಿಮಿಟ್ಟದಲ್ಲಿ ಅಪಘಾತ ಸಂಭವಿಸಿದೆ. ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಸತ್ತವ ರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಅವರೆಲ್ಲರೂ ಮದುವೆಗೆ ತೆರಳುತ್ತಿದ್ದರು.
ಅಪಘಾತ ಸಂಭವಿಸಿದ ವೇಳೆಯಲ್ಲಿ ಆಟೋದಲ್ಲಿ ಆರು ಮಂದಿ ಇದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.