Thursday, 12th December 2024

ಟ್ರಕ್‍ಗೆ ಎಸ್‍ಯುವಿ ಕಾರು ಡಿಕ್ಕಿ: ಆರು ಮಂದಿ ಸಾವು

ಸಾಗರ್‌ : ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಎಸ್‍ಯುವಿ ಕಾರು ಎದುರಿನಿಂದ ಬರುತ್ತಿದ್ದ ಟ್ರಕ್‍ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿ ದ್ದಾರೆ.

ಸನೋಧಾ ಪೊಲೀಸ್ ಠಾಣೆ ವ್ಯಾಪ್ತಿಯ ಸನೋಧಾ ಜಟಾಶಂಕರ ಕಣಿವೆ ಬಳಿ ಈ ದುರ್ಘ ಟನೆ ನಡೆದಿದೆ. ಅಪಘಾತದ ಸಮಯ ದಲ್ಲಿ ಕಾರಿನಲ್ಲಿ ಏಳು ಜನರಿದ್ದರು. ಅವರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು. ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಗಾಯಗೊಂಡವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ಅಭಿಷೇಕ್ ತಿವಾರಿ ತಿಳಿಸಿದರುಟ್ರಕ್ ಚಾಲಕನನ್ನು ಗುರುತಿಸಲಾಗಿದ್ದು, ಆತನನ್ನು ಬಂಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಕಾರು ಸಾಗರದಿಂದ ಗಡಕೋಟಾ ಕಡೆಗೆ ಹೋಗುತ್ತಿದ್ದು, ಟ್ರಕ್ ಗಢಕೋಟಾದಿಂದ ಸಾಗರ ಕಡೆಗೆ ಬರುತ್ತಿತ್ತು. ಅಪಘಾತದಲ್ಲಿ ಕಾರು ಹಾರಿಹೋದರೆ, ಬೇವಿನ ಮರಕ್ಕೆ ಟ್ರಕ್ ಡಿಕ್ಕಿ ಹೊಡೆದ ಕಾರಣ ಮರ ಬೇರು ಸಮೇತ ಮುರಿದು ಬಿದ್ದಿದೆ.