ಭೋಪಾಲ್: ಮಧ್ಯಪ್ರದೇಶ ಸರ್ಕಾರ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ರೈತರ ಬಡ್ಡಿ ಮನ್ನಾ ಯೋಜನೆಗೆ ಚಾಲನೆ ನೀಡಲು ತೀರ್ಮಾನಿಸಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ವರ್ಷಾಂತ್ಯದಲ್ಲಿ ರಾಜ್ಯ ಚುನಾವಣೆಗೆ ಮುನ್ನ ರೈತರ ಬಡ್ಡಿ ಮನ್ನಾ ಅಭಿಯಾನಕ್ಕೆ ಸಾಗರ್ ಜಿಲ್ಲೆಯ ಕರ್ಬಾನಾ ಗ್ರಾಮದಿಂದ ಚಾಲನೆ ನೀಡುತ್ತಿದ್ದಾರೆ.
ರೈತರ ಸಾಲದ ಮೇಲಿನ ಬಡ್ಡಿ ಮನ್ನಾದಿಂದ ಸರ್ಕಾರಕ್ಕೆ 2200 ಕೋಟಿ ರೂ.ಗಳ ಹೊರೆ ಬೀಳಲಿದ್ದು, ಇದರಿಂದ 11 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ.
ರೈತ ಸಹೋದರ ಸಹೋದರಿಯರನ್ನು ರಾಜ್ಯ ಸರ್ಕಾರವು ಬಡ್ಡಿಯನ್ನು ಪಾವತಿಸುವು ದರೊಂದಿಗೆ ಸುಸ್ತಿದಾರರೆಂದು ಕರೆಯುವು ದಿಲ್ಲ. ಅವರಿಗೆ ಸಮಿತಿಯಿಂದ ಡೀಫಾಲ್ಟ್-ಮುಕ್ತ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ರೈತರು ಶೂನ್ಯ ಶೇಕಡಾ ಬಡ್ಡಿದರ ದಲ್ಲಿ ಯೋಜನೆಗೆ ಅರ್ಹರಾಗುತ್ತಾರೆ ಎಂದು ಶಿವರಾಜ್ ಸಿಂಗ್ ತಿಳಿಸಿದ್ದಾರೆ.
ಯೋಜನೆ ಅನುಷ್ಠಾನಗೊಂಡ ನಂತರ, ಸುಸ್ತಿದಾರರಿಗೆ ಪೂರೈಕೆಯನ್ನು ನಿಲ್ಲಿಸಿದ ಕೃಷಿ ಸೊಸೈಟಿಗಳಿಂದ ರೈತರು ರಸಗೊಬ್ಬರ ಮತ್ತು ಬೀಜಗಳನ್ನು ಪಡೆಯಬೇಕಾಗುತ್ತದೆ ಈ ಹಂತದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ರೈತರಿಗೆ ಪರಿಹಾರ ನೀಡಲು ಮುಂದಾಗಿದೆ.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗಳಿಗೆ ಸಂಯೋಜಿತವಾಗಿರುವ ಪ್ರಾಥಮಿಕ ಕೃಷಿ ಸಾಲ ಸಂಘಗಳ ಅಡಿಯಲ್ಲಿರುವ ರೈತರಿಗೆ, ಬಡ್ಡಿ ಸೇರಿದಂತೆ ಒಟ್ಟು 2 ಲಕ್ಷದವರೆಗಿನ ಸಾಲದ ಮೊತ್ತವು ಮಾರ್ಚ್ 31, 2023 ರಂತೆ ಮತ್ತು ಸುಸ್ತಿದಾರರಾಗಿದ್ದರೆ, ಅವರಿಗೆ ಬಡ್ಡಿ ಮನ್ನಾ ನೀಡಲಾಗುತ್ತದೆ.