Monday, 13th January 2025

Mahakumbh 2025: AI ಕ್ಯಾಮರಾ, NSG ಕಮಾಂಡೋ, ಡ್ರೋನ್‌ಗಳು- ಮಹಾಕುಂಭಮೇಳಕ್ಕೆ ಭದ್ರತಾ ವ್ಯವಸ್ಥೆ ಹೇಗಿದೆ ಗೊತ್ತಾ?

Kumbamela

ಪ್ರಯಾಗ್‌ರಾಜ್‌: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ (Mahakumbh 2025) ಇಂದಿನಿಂದ ವಿಜೃಂಭಣೆಯಿಂದ ಚಾಲನೆ ದೊರಕಿದೆ. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬರೋಬ್ಬರಿ 45 ಕೋಟಿಗೂ ಹೆಚ್ಚು ಜನರ ಆಗಮಿಸುವ ನಿರೀಕ್ಷೆ ಇದ್ದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯಾಗ್‌ರಾಜ್ ನಗರದಾದ್ಯಂತ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಈ ಕುರಿತು ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದು,ಸಮಗ್ರ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಗ್‌ರಾಜ್‌ ಜಿಲ್ಲೆಯನ್ನು ನೆರೆಯ ಪ್ರದೇಶಗಳಿಗೆ ಸಂಪರ್ಕಿಸುವ ಪ್ರಮುಖ ಮಾರ್ಗಗಳನ್ನು ಒಳಗೊಂಡಂತೆ ಪ್ರಯಾಗ್‌ರಾಜ್ ಸುತ್ತಮುತ್ತಲು ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಹಾಕುಂಭಮೇಳಕ್ಕೆ ಭದ್ರತಾ ವ್ಯವಸ್ಥೆಗಳು

  • ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನಿರ್ದೇಶನಗಳಿಗೆ ಅನುಗುಣವಾಗಿ, ಪೊಲೀಸರು ಏಳು ನಿರ್ಣಾಯಕ ಮಾರ್ಗಗಳಲ್ಲಿ 102 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.
  • ಸುಮಾರು 40,000 ಪೊಲೀಸ್ ಸಿಬ್ಬಂದಿ ಮತ್ತು ಸೈಬರ್ ಅಪರಾಧ ತಜ್ಞರು, ಕೃತಕ ಬುದ್ಧಿಮತ್ತೆ (AI) ಚಾಲಿತ ಕಣ್ಗಾವಲು ಜಾಲವನ್ನು ರಚಿಸಲಾಗಿದೆ.
  • ಪ್ರಯಾಗ್‌ರಾಜ್ ಜಿಲ್ಲೆಯನ್ನು ನೆರೆಯ ಜಿಲ್ಲೆಗಳಿಗೆ ಸಂಪರ್ಕಿಸುವ ಏಳು ಮಾರ್ಗಗಳಲ್ಲಿ 102 ಚೆಕ್‌ಪೋಸ್ಟ್‌ಗಳನ್ನು ನಿರ್ವಹಿಸಲು 71 ಇನ್ಸ್‌ಪೆಕ್ಟರ್‌ಗಳು, 234 ಸಬ್-ಇನ್‌ಸ್ಪೆಕ್ಟರ್‌ಗಳು ಮತ್ತು 645 ಕಾನ್‌ಸ್ಟೆಬಲ್‌ಗಳು ಸೇರಿದಂತೆ 1,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
  • ಕಣ್ಗಾವಲು ಬಲಪಡಿಸಲು, ಐದು ವಜ್ರ ವಾಹನಗಳು, 10 ಡ್ರೋನ್‌ಗಳು ಮತ್ತು ನಾಲ್ಕು ವಿಧ್ವಂಸಕ ವಿರೋಧಿ ತಂಡಗಳು ಈ ಪ್ರದೇಶದಲ್ಲಿ 24/7 ಗಸ್ತು ತಿರುಗುತ್ತವೆ.
  • ದೇವಾಲಯಗಳು ಮತ್ತು ಅಖಾಡಗಳು ಸೇರಿದಂತೆ ಪ್ರಮುಖ ಸ್ಥಾಪನೆಗಳನ್ನು ರಕ್ಷಿಸಲು ಉತ್ತರ ಪ್ರದೇಶ ಪೊಲೀಸರು ಪ್ರಯಾಗರಾಜ್ ಸುತ್ತಲೂ “ಭೇದಿಸಲಾಗದ ಭದ್ರತಾ ಚಕ್ರವ್ಯೂಹ” ಎಂದು ಕರೆಯಲ್ಪಡುವ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
  • ಉತ್ತರ ಪ್ರದೇಶ ಪೊಲೀಸರ ಜೊತೆಗೆ ರಾಜ್ಯ ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC) ಕಾರ್ಯನಿರ್ವಹಿಸುತ್ತಿದೆ
  • ಪೊಲೀಸರು ನೀರೊಳಗೂ ಕಾರ್ಯನಿರ್ವಹಿಸಬಲ್ಲ ಡ್ರೋನ್‌ಗಳು ಮತ್ತು AI-ಸಕ್ರಿಯಗೊಳಿಸಿದ ಕ್ಯಾಮೆರಾಗಳು ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಸಹ ಬಳಸುತ್ತಿದ್ದಾರೆ. ಕುಂಭ ಪ್ರದೇಶದ ಸುತ್ತಲೂ ಒಟ್ಟು 2,700 AI (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ ಮತ್ತು 113 ನೀರೊಳಗಿನ ಡ್ರೋನ್‌ಗಳು ಜಲಮಾರ್ಗಗಳನ್ನು ಮೇಲ್ವಿಚಾರಣೆ ಮಾಡುತ್ತವೆ.

ಈ ಸುದ್ದಿಯನ್ನೂ ಓದಿ: Mahakumbh: ಮಹಾಕುಂಭ ಮೇಳಕ್ಕೆ ಪ್ರಯಾಗ್‌ರಾಜ್‌ ಸಜ್ಜು; 40 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ

Leave a Reply

Your email address will not be published. Required fields are marked *