ಮುಂಬೈ: ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನಾವಿಸ್(Devendra Fadnavis) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಪ್ರಮಾಣ ಶನಿವಾರ ಸಚಿವ ಸಂಪುಟದ ಖಾತೆಗಳನ್ನು ಘೋಷಿಸಲಾಯಿತು(Maharashtra Government). ಖಾತೆ ಹಂಚಿಕೆ ಬಗ್ಗೆ ಇದ್ದ ಭಾರೀ ಕುತೂಹಲಕ್ಕೆ ಇಂದು ತೆರೆ ಬಿದ್ದಿದ್ದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಅವರಿಗೆ ನಗರಾಭಿವೃದ್ಧಿ, ವಸತಿ ಮತ್ತು ಲೋಕೋಪಯೋಗಿ ಖಾತೆಯನ್ನು ನೀಡಲಾಗಿದೆ. ಆದರೆ ಶಿಂಧೆ ಈ ಹಿಂದೆ ಹೊಂದಿದ್ದ ಗೃಹ ಖಾತೆಯನ್ನು ಫಡ್ನವಿಸ್ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
Maharashtra Portfolio Allocation
— Jammu-Kashmir Now (@JammuKashmirNow) December 21, 2024
Chief Minister Devendra Fadnavis will handle the Home Ministry, along with Law and Judiciary.
Deputy Chief Minister Eknath Shinde has been given Urban Development, Housing, and Public Works.
Deputy Chief Minister Ajit Pawar will take charge of… pic.twitter.com/DIVJ2fDTzy
ಎರಡನೇ ಉಪಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರಿಗೆ ಹಣಕಾಸು ಸಚಿವಾಲಯದ ಪ್ರಮುಖ ಖಾತೆಯನ್ನು ನೀಡಲಾಯಿತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗೃಹ, ಇಂಧನ ಮತ್ತು ಕಾನೂನು ಸಚಿವಾಲಯಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಸರ್ಕಾರಕ್ಕೆ ಗರಿಷ್ಠ 43 ಮಂದಿ ಸಚಿವರನ್ನು ಹೊಂದುವ ಅವಕಾಶ ಇದೆ. ಇವರ ಪೈಕಿ 19 ಮಂದಿ ಬಿಜೆಪಿಯವರು. ಇನ್ನು ಶಿವ ಸೇನೆಯ 11 ಮತ್ತು ಎನ್‌ಸಿಪಿಯ 9 ಸಚಿವರು ಸಂಪುಟ ಸೇರಿದ್ದಾರೆ. ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂಧೆ ಮತ್ತು ಅಜಿತ್ ಪವಾರ್ ಅವರನ್ನು ಸೇರಿಸಿದರೆ ಒಟ್ಟು 42 ಸ್ಥಾನ ಭರ್ತಿಯಾದಂತಾಗುತ್ತದೆ.
288 ಸೀಟುಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ 230 ಕಡೆ ಜಯಗಳಿಸಿದೆ. ಈ ಪೈಕಿ ಬಿಜೆಪಿಯೊಂದೇ 132 ಸ್ಥಾನಗಳನ್ನು ಗೆದ್ದುಕೊಂಡಿದೆ. ಶಿವ ಸೇನೆ ಮತ್ತು ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸೀಟು ತನ್ನದಾಗಿಸಿಕೊಂಡಿದೆ. ಡಿ. 5ರಂದು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದೇ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೂ ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಮಹಾರಾಷ್ಟ್ರದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಮಹಾಯುತಿ (Mahayuti) ಸರ್ಕಾರದ ಸಚಿವ ಸಂಪುಟ ಡಿ. 15ರಂದು ವಿಸ್ತರಣೆಯಾಗಿದೆ. ನಾಗ್ಪುರ ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 39 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಸುಮಾರು 3 ವಾರಗಳ ನಂತರ ದೇವೇಂದ್ರ ಫಡ್ನವೀಸ್ (Devendra Fadnavis) ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ.
ಈ ಸುದ್ದಿಯನ್ನೂ ಓದಿ: Maharashtra Cabinet Expansion: ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ; ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಲ್ಲಿದೆ