Sunday, 15th December 2024

ಮಹಾರಾಷ್ಟ್ರ ಸಚಿವ ಜಯಂತ್‌ ಪಾಟೀಲ್‌ಗೆ ಕೋವಿಡ್

ಮುಂಬೈ: ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಹಾಗೂ ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್‌ ಪಾಟೀಲ್‌ ಅವರಿಗೆ ಕೋವಿಡ್‌ ದೃಢಪಟ್ಟಿದೆ.

ಸಚಿವರು ಟ್ವೀಟ್‌ ಮಾಡಿ, ತಾವು ಸೂಕ್ತ ವೈದ್ಯಕೀಯ ಸಲಹೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ರಾಷ್ಟ್ರವಾದಿ ಪರಿವಾರ್‌ ಸಂವಾದ ಯಾತ್ರೆ ಸಲುವಾಗಿ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರು. ತಮ್ಮ ಸಂಪರ್ಕಕ್ಕೆ ಬಂದವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ.

ಸಚಿವರಾದ ಅನಿಲ್‌ ದೇಶ್‌ಮುಖ್‌, ಸಾತೇಜ್‌ ಪಾಟೀಲ್‌ ಮತ್ತು ರಾಜೇಂದ್ರ ಶಿಂಗ್ನೆ ಅವರಿಗೂ ಈಚೆಗೆ ಈ ಸೋಂಕು ತಗುಲಿತ್ತು.