Friday, 20th September 2024

ಗಂಡನಿಗೆ ಮಾಸಿಕ ಸಾವಿರ ರೂ. ಭತ್ಯೆ: ಕೌಟುಂಬಿಕ ನ್ಯಾಯಾಲಯ ನಿರ್ದೇಶನ

ಮುಝಾಫರ್ ನಗರ: ಗಂಡನಿಗೆ ಮಾಸಿಕ 1 ಸಾವಿರ ರೂ. ನಿರ್ವಹಣಾ ಭತ್ಯೆ ನೀಡುವಂತೆ ಪತ್ನಿಗೆ ಇಲ್ಲಿನ ಕೌಟುಂಬಿಕ ನ್ಯಾಯಾಲಯವೊಂದು ನಿರ್ದೇಶನ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪತಿ ಹಾಗೂ ಪತ್ನಿ ಹಲವು ವರ್ಷಗಳಿಂದ ಬೇರೆ ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ, ಸರ್ಕಾರದಿಂದ ಪಿಂಚಣಿ ಬರುವ ಪತ್ನಿ ತನ್ನ ಗಂಡನಿಗೆ ನಿರ್ವಹಣಾ ಭತ್ಯೆ ಪಾವತಿಸಬೇಕೆಂದು ಸೂಚಿಸಿದೆ.

ಹಿಂದೂ ವಿವಾಹ ಕಾಯ್ದೆ 1955 ಅಡಿಯಲ್ಲಿ ಪತ್ನಿಯಿಂದ ನಿರ್ವಹಣಾ ಭತ್ಯೆ ನೀಡಲು ಕೋರಿ ಪತಿ 2013ರಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದ. ನಿವೃತ್ತ ಸರ್ಕಾರಿ ನೌಕರರಾಗಿರುವ ಪತ್ನಿ ತಿಂಗಳಿಗೆ 12 ಸಾವಿರ ರೂ. ಪಿಂಚಣಿ ಪಡೆಯುತ್ತಿದ್ದು, ಗಂಡನಿಗೆ ನಿರ್ವಹಣಾ ಭತ್ಯೆಯಾಗಿ ಮಾಸಿಕ ಒಂದು ಸಾವಿರ ರೂಪಾಯಿ ನೀಡು ವಂತೆ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಪ್ರಕಟಿಸಿದ್ದಾರೆ.