Thursday, 12th December 2024

ಕೋವಿಡ್19: ಮಾಜಿ ಪ್ರಧಾನಿ ಡಾ.ಮನ್ಮೋಹನ್ ಸಿಂಗ್ ಚೇತರಿಕೆ

ನವದೆಹಲಿ: ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಳ್ಳು ತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಶನಿವಾರ ಹೇಳಿದ್ದಾರೆ.

ಸಿಂಗ್ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕೋವಿಡ್-19 ಪಾಸಿಟಿವ್ ದೃಢಪಟ್ಟ ನಂತರ ಸ್ವಲ್ಪ ಪ್ರಮಾಣದ ಜ್ವರದೊಂದಿಗೆ ಏ.19ರಂದು ಸಿಂಗ್ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮನ್ ಮೋಹನ್ ಸಿಂಗ್ ಮಾರ್ಚ್ 4 ಮತ್ತು ಏಪ್ರಿಲ್ 3 ರಂದು ಎರಡು ಡೋಸ್ ಕೋವಿಡ್-19 ಲಸಿಕೆಪಡೆದಿದ್ದರು.

ಮನ್ ಮೋಹನ್ ಸಿಂಗ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಭಾರತೀಯರಿಗೆ ಧನ್ಯವಾದ ಸಲ್ಲಿಸುವುದಾಗಿ ಸುರ್ಜೇವಾಲಾ ಹೇಳಿದ್ದಾರೆ.