ನವದೆಹಲಿ: ಭಾರತದ ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಮನಮೋಹನ್ ಸಿಂಗ್ (Manmohan Singh) ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರು ಕೇವಲ ರಾಜಕೀಯ ಮಾತ್ರವಲ್ಲದೆ ಹಲವಾರು ವಿಷಯಗಳಲ್ಲಿ ಪರಿಣಿತಿ ಹೊಂದಿದ್ದರು. ಸಿಂಗ್ ಅವರನ್ನು ಪಿ.ವಿ.ನರಸಿಂಹರಾವ್ ಆಳ್ವಿಕೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ದಾರಿಮಾಡಿಕೊಟ್ಟ ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಎಂದು ಪರಿಗಣಿಸಲಾಗಿದೆ. ಇದರ ಹೊರತಾಗಿ ಮನಮೋಹನ್ ಸಿಂಗ್ ಸಾಹಿತ್ಯ ಹಾಗೂ ಶಾಯರಿಗಳ ಮೇಲೆ ವಿಶೇಷ ಒಲವು ಹೊಂದಿದ್ದರು. ವಿಪಕ್ಷಗಳ ಮೇಲೆ ಹರಿಹಾಯಲು ಎಷ್ಟೋ ಬಾರಿ ಶಾಯರಿಗಳನ್ನು ಬಳಸಿದ್ದುಂಟು. ಅಂತಹುದೇ ಒಂದು ಪ್ರಕರಣ ಸುಷ್ಮಾ ಸ್ವರಾಜ್ (Sushma Swaraj) ಅವರೊಂದಿಗೂ ನಡೆದಿತ್ತು.
ಮನಮೋಹನ್ ಸಿಂಗ್ ಸಂಸತ್ತನಲ್ಲಿ ಭಾಷಣ ಮಾಡಿದಾಗಲೆಲ್ಲ ಕವನಗಳು ಇದ್ದೇ ಇರುತ್ತಿತ್ತು. 2009-14 ರ ವರೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕಿ ದಿ. ಸುಷ್ಮಾ ಸ್ವರಾಜ್ ಆಗಿದ್ದರು. ಆಗ ಇಬ್ಬರ ನಡುವೆ ಶಾಯರಿಯ ಜುಗಲ್ಬಂದಿ ಏರ್ಪಟ್ಟಿತ್ತು.
2008 ರಲ್ಲಿ ನಡೆದ ವಿಶ್ವಾಸಮತದ ವೇಳೆ ಸಂಸದರಿಗೆ ಲಂಚ ನೀಡಿದ ಆರೋಪ ಕಾಂಗ್ರೆಸ್ ಮೇಲಿತ್ತು. ಈ ಕುರಿತು ಆಡಳಿತ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ ಸುಷ್ಮಾ ಸ್ವರಾಜ್ ಪ್ರಧಾನಿಯನ್ನು ಗುರಿಯಾಗಿಸಿಕೊಂಡು, “ತು ಇಧರ್ ಉಧರ್ ಕಿ ನಾ ಬಾತ್ ಕರ್, ಯೇ ಬತಾ ಕಿ ಕಾಫಿಲಾ ಕ್ಯೂಂ ಲೂತಾ, ಹುಮೇನ್ ರಹಜಾನೋ ಸೇ ಗಿಲಾ ನಹೀ, ತೇರಿ ರಹಬರಿ ಕಾ ಸಾವಲ್ ಹೈ (ನೀವು ಬೇರೆಯದ್ದನ್ನು ಮಾತನಾಡಬೇಡಿ , ನಾನು ಕೇಳುತ್ತಿರುವುದು ನೀವು ಸಂಸದರಿಗೆ ಆಮಿಷ ಏಕೆ ಒಡ್ಡಿದಿರಿ ಎಂದು , ಮೊದಲು ಅದರ ಬಗ್ಗೆ ಸಷ್ಟನೆ ನೀಡಿ) ಎಂದು ಪ್ರಶ್ನಿಸಿದ್ದರು.
ಇದಕ್ಕೆ ಶಾಯರಿ ಮೂಲಕ ಉತ್ತರಿಸಿದ ಪ್ರಧಾನಿ ಸಿಂಗ್ ಪ್ರಧಾನಿಯವರು ಅಲ್ಲಮ ಇಕ್ಬಾಲ್ ದ್ವಿಪದಿಯೊಂದಿಗೆ ತಮ್ಮ ಮಾತನ್ನು ಪ್ರಸ್ತುತ ಪಡಿಸಿದ್ದರು. “ಮನ್ ಕಿ ತೇರಿ ದೀದ್ ಕೆ ಕಾಬಿಲ್ ನಹಿಂ ಹೂನ್ ಮೈನ್, ತು ಮೇರಾ ಶೌಕ್ ದೇಖ್ ಮೇರಾ ಇಂತೇಜಾರ್ ದೇಖ್” (ನಾನು ನಿಮ್ಮ ಗಮನಕ್ಕೆ ಯೋಗ್ಯನಲ್ಲ ಎಂದು ನನಗೆ ತಿಳಿದಿದೆ, ಆದರೆ ನನ್ನ ಹಂಬಲವನ್ನು ನೋಡಿ) ಎಂದು ಹೇಳಿದ್ದರು.
#ManmohanSingh pic.twitter.com/mrmcDGQsCA
— Swaraj Srivastava (@SwarajAjad) December 27, 2024
2013ರಲ್ಲಿ ಮತ್ತೆ ಇಬ್ಬರ ನಡುವೆ ಶಾಯರಿ ಯುದ್ಧ ಪ್ರಾರಂಭವಾಗಿತ್ತು. ಮಿರ್ಜಾ ಗಾಲಿಬ್ ಅವರ ಕಾವ್ಯವನ್ನು ಬಳಸಿಕೊಂಡು “ಹುಮೇನ್ ಉನ್ಸೆ ಹೈ ವಫಾ ಕಿ ಉಮ್ಮೀದ್ ಜೋ ನಹಿಂ ಜಾಂತೇ ವಫಾ ಕ್ಯಾ ಹೈ” (ನಿಷ್ಠೆ ಎಂದರೇನು ಎಂದು ತಿಳಿದಿಲ್ಲದವರಿಂದ ನಾವು ನಿಷ್ಠೆಯನ್ನು ನಿರೀಕ್ಷಿಸುತ್ತೇವೆ) ಎಂದು ಹೇಳಿದ್ದರು.
ಇದಕ್ಕೆ ಸುಷ್ಮಾ ಕೂಡ ಬಶೀರ್ ಬದರ್ ಅವರ “ಕುಚ್ ತೋ ಮಜುರಿಯನ್ ರಹೀ ಹೊಂಗಿ, ಯುನ್ ಹೈ ಕೋಯಿ ಬೇವಫಾ ನಹಿಂ ಹೋತಾ” ಕೆಲವು ಒತ್ತಾಯಗಳು ಇದ್ದಿರಬೇಕು, ಯಾರೂ ಹಾಗೆ ವಿಶ್ವಾಸದ್ರೋಹಿಗಳಲ್ಲ ಎಂದು ಹೇಳಿದ್ದರು.
ಈ ಸುದ್ದಿಯನ್ನೂಓದಿ : Manmohan Singh: ಮನಮೋಹನ್ ಸಿಂಗ್ ಕುರಿತ ಕುತೂಹಲಕರ ಸಂಗತಿಗಳಿವು!